ತುಮಕೂರು : ವಿಷಪೂರಿತ ನೀರು ಸೇವಿಸಿ 22 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಶಿರಾದ ತರೂರು ಗ್ರಾಮದ ಶಿವಣ್ಣ ಎಂಬುವವರಿಗೆ ಸೇರಿದ ಕುರಿಗಳು ಮೃತಪಟ್ಟಿದೆ. ಕೈಗಾರಿಕಾ ಕಾರ್ಖಾನೆಗಳು ರಾಸಾಯನಯುಕ್ತ ನೀರನ್ನು ಶುದ್ಧೀಕರಿಸದೆ ಹಾಗೆಯೇ ಕೆರೆ ಕಟ್ಟೆಗಳಿಗೆ ಬಿಡುತ್ತಿರುವ ಕಾರಣದಿಂದಾಗಿ ಗುಂಡಿಯಲ್ಲಿ ನಿಂತಿದ್ದ ವಿಷಪೂರಿತ ನೀರನ್ನು ಸೇವಿಸಿ ಕುರಿಗಳು ಮೃತಪಟ್ಟಿವೆ ಎಂದು ರೈತರು ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










