ವೃದ್ಧರ ಅಂಗಿಯೊಳಗೆ ಸೇರಿಕೊಂಡಿದ್ದ ಹಾವನ್ನು ಹೊರತೆಗೆದ ಉರಗ ತಜ್ಞ…

592
firstsuddi

ಮಹರಾಷ್ಟ್ರ : ವಿಷಪೂರಿತ ಹಾವೊಂದು ವೃದ್ಧರೊಬ್ಬರ ಬಟ್ಟೆಯೊಳಗೆ ಸೇರಿಕೊಂಡಿದ್ದ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ. ಅಹ್ಮದ್‍ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ವೃದ್ಧರೊಬ್ಬರು ಚಿಕಿತ್ಸೆ ನೀಡಲು ತಡವಾದ್ದರಿಂದ ಆಸ್ಪತ್ರೆಯ ಕಂಬದ ಬಳಿ ಮಲಗಿದ್ದ ವೇಳೆ ಹಾವೊಂದು ವೃದ್ಧರ ಬಟ್ಟೆಯೊಳಗೆ ಸೇರಿಕೊಂಡಿದ್ದು, ಅದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಉರಗ ತಜ್ಞರಿಗೆ ಮಾಹಿತಿಯನ್ನು ತಿಳಿಸಿದರು. ಮಾಹಿತಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಉರಗ ತಜ್ಞ ನಿಧಾನವಾಗಿ ವೃದ್ಧರಿಗೆ ಗೊತ್ತಾಗದೆ ಬಟ್ಟೆ ಒಳಗೆ ಇದ್ದ ಹಾವನ್ನು ಹೊರತೆಗೆದಿದ್ದು, ಇದು ಬಹಳ ವಿಷಪೂರಿತ ಹಾವಾಗಿದ್ದು, ಯಾರಾದರೂ ಇದಕ್ಕೆ ತೊಂದರೆ ನೀಡಿದರೆ ಮಾತ್ರ ಕಚ್ಚುತ್ತದೆ ಎಂದು ತಿಳಿಸಿದರು.