ಮಾಸ್ಕೋ : ಶೀತಲ ಸಮರವನ್ನು ಅಂತ್ಯಗೊಳಿಸಿದ್ದ ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಗೋರ್ಬಚೇವ್ ಅವರು ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರು ನಿನ್ನೆ ಇಹಲೋಕ ತ್ಯಜಿಸಿದರು.
2ನೇ ಮಹಾಯುದ್ಧದ ನಂತರ ರಷ್ಯಾ ನೇತೃತ್ವದ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕ ನಡುವೆ ಶೀತಲ ಯುದ್ಧದ ರೂಪದಲ್ಲಿ ತಲೆದೋರಿದ್ದ ಸುದೀರ್ಘ ಸಂಘರ್ಷವನ್ನು ರಕ್ತಪಾತವಿಲ್ಲದೆ ಅಂತ್ಯಗೊಳಿಸಿದ್ದರು.
ಮಿಖಾಯಿಲ್ ಗೋರ್ಬಚೇವ್ ಅವರು ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟದ (ಯುಎಸ್ಎಸ್ ಆರ್) ಕೊನೆಯ ಅಧ್ಯಕ್ಷರಾಗಿದ್ದರು. ಯುಎಸ್ ಎಸ್ ಆರ್ ವಿಭಜನೆಗೊಂಡು 1991 ರ ದಂಗೆಯ ನಂತರ ಅವರು ಅಧಿಕಾರ ಕಳೆದುಕೊಂಡರು. 1985 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ಈ ಹಿಂದಿನ ಅಧ್ಯಕ್ಷರು ಮೊಟಕುಗೊಳಿಸಿದ್ದ ವಾಕ್ ಸ್ವಾತಂತ್ರ್ಯದ ನೀತಿಯನ್ನು ಸುಧಾರಿಸಿದರು.










