ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಕಾರ್ಯಪ್ರವೃತರಾದ ತಹಾಸೀಲ್ದಾರರು. ಇದು ಫಸ್ಟ್ ಸುದ್ದಿ ಫಲಶ್ರುತಿ**

ಮೂಡಿಗೆರೆ :ಪಟ್ಟಣದ ಹೋಟೆಲ್ ಬೇಕರಿಗಳಲ್ಲಿ ಅಶುಚಿತ್ವದ ಬಗ್ಗೆ ಇತ್ತೀಚಿಗೆ ಫಸ್ಟ್ ಸುದ್ದಿ ದಿನಾಂಕ 16-07-2019 ರಂದು ವಸ್ತುನಿಷ್ಟ ವರದಿಯನ್ನು ಪ್ರಕಟಮಾಡಿತ್ತು. ಈ ಸುದ್ದಿಯನುಸಾರ ಇಲ್ಲಿನ ತಹಾಸೀಲ್ದಾರರಾದ ಹೆಚ್.ಎಂ.ರಮೇಶ್ ರವರು ಸುದ್ದಿ ಪ್ರಕಟಗೊಂಡ ದಿನದಂದೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಾದ ತಾಲ್ಲೂಕು ಆರೋಗ್ಯಧಿಕಾರಿಗಳು, ಹಾಗೂ ಪಟ್ಟಣದ ಆರೋಗ್ಯ ನಿರೀಕ್ಷಕರಿಗೆ ಶುಚಿತ್ವದ ಬಗ್ಗೆ ಇಲ್ಲಿನ ಸ್ಥಳೀಯ ಹೋಟೆಲ್ ಬೇಕರಿಗಳಿಗೆ ತೆರಳಿ ಪರಿಶೀಲಿಸಿ ತಗೆದುಕೊಂಡ ಕ್ರಮದ ಬಗ್ಗೆ ಈ ಇಲಾಖೆಗೆ ಮೂರು ದಿನಗಳ ಒಳಗೆ ಮಾಹಿತಿಯನ್ನು ನೀಡಲು ಆದೇಶಿಸಿದ್ದಾರೆ.
ಈ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ತಾಲ್ಲೂಕು ತಹಾಸೀಲ್ದಾರರು ನಾನು ವರ್ಗಾವಣೆ ಆಗಿ ಬಂದು 15 ದಿವಸವಾಯಿತು. ಇತ್ತೀಚಿಗೆ ಮಲೆನಾಡಿನಲ್ಲಿ ಈ ಭಾರಿ ಪ್ರಕೃತಿ ವಿಕೋಪವಾಗಿ ಮಳೆ, ಗಾಳಿ, ಬಿಸಿಲು ಕ್ರಮವಾಗಿ ಬರದೆ ರೋಗರುಜಿನಗಳು ಆದಷ್ಠು ಬೇಗ ಅಂಟಿಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ. ಅದು ಅಲ್ಲದೇ ಇಲ್ಲಿನ ಹೋಟೇಲ್ ಹಾಗೂ ಬೇಕರಿ ಮಾಲಿಕರು ಅವರು ತಯಾರು ಮಾಡುವ ಅಡುಗೆ ಕೋಣೆಯಲ್ಲಿ ಶುಚಿತ್ವ ಕಾಪಾಡದೇ ಅದರಲ್ಲೇ ಪದಾರ್ಥಗಳನ್ನು ತಯಾರಿಸಿ ಕೊಡುತ್ತಿದ್ದು, ಅದನ್ನು ಯಾವಾಗ ತಯಾರು ಮಾಡಿದ್ದಾರೆ ಎಂದು ಗೊತ್ತಾಗುವುದಿಲ್ಲ ಹಾಗೂ ಕನಿಷ್ಠ ಕುಡಿಯಲು ಸಹ ಶುದ್ದಿಯಾದ ನೀರನ್ನು ಒದಗಿಸದೇ ಕೇವಲ ಹಣ ಮಾಡುವುದೊಂದು ಬಿಟ್ಟರೆ ಇವರಿಗೆ ಜನರ ಆರೋಗ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲದೇ ಇಲ್ಲಿನ ನಾಗರಿಕರಿಗೆ ಡೆಂಗ್ಯು ತರಹದ ಮುಂತಾದ ಭಯಾನಕ ರೋಗಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಈ ವಿಚಾರವಾಗಿ ನಾನು ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕೇವಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಾಮಕಾವಸ್ಥೆಗೆ ಕೆಲಸ ಮಾಡುವುದು ಬೇಡ ಅವರವರು ತಮ್ಮ ಕೆಲಸದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿ ಅದರಂತೆ ನಾನು ಈ ಕೂಡಲೇ ಸಂಬಂಧಿಸಿದವರಿಗೆ ಸೂಕ್ತ ಕ್ರಮಕೈಗೊಂಡು ತೆಗೆದುಕೊಂಡ ಕ್ರಮದ ಬಗ್ಗೆ ನನ್ನ ಕಛೇರಿಗೆ ಸೂಕ್ತ ಮಾಹಿತಿ ನೀಡಲು ಆದೇಶಿಸಿರುತ್ತೇನೆ ಎಂದ ಅವರು ನಾನು ತಾಲ್ಲೂಕಿನಲ್ಲಿ ಮೊದಲು ಶುಚಿತ್ವದ ಕಡೆ ಒತ್ತನ್ನು ಕೊಡಲು ಅಧಿಕಾರಿಗಳಿಗೆ ತಾಕೀತು ಮಾಡುತ್ತೇನೆ. ಏನಾದರು ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನ ಕಛೇರಿಗೆ ಬಂದು ಸಾರ್ವಜನಿಕರು ದೂರನ್ನು ನೀಡಬಹುದು ಇದರ ಬಗ್ಗೆ ನಾನು ನಿಸ್ಪಕ್ಷಪಾತವಾಗಿ ಕೆಲಸ ಮಾಡಿ ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತೇನೆ ಎಂದರು.










