ಶ್ರೀರಾಮನ ಕಟೌಟ್ ಪಾದಚಾರಿಗಳ ಮೇಲೆ ಬಿದ್ದು ಮೂವರು ಗಂಭೀರ…

45
firstsuddi

ಬೆಂಗಳೂರು: ಶ್ರೀರಾಮನ ಕಟೌಟ್ ಪಾದಚಾರಿಗಳ ಮೇಲೆ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ನಡೆದಿದೆ.

ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಹೆಚ್ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೆ ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದು 10 ದಿನಗಳಾದರೂ ಕಟೌಟ್ ತೆರವು ಗೊಳಿಸದ ಹಿನ್ನೆಲೆ ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಕಟೌಟ್ ಬಿದ್ದಿದೆ. ಇದರಿಂದ ಮೂರು ಜನ ಪಾದಚಾರಿಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಟೌಟ್ ಅಳವಡಿಕೆ ವೇಳೆ ಸರಿಯಾದ ಸುರಕ್ಷತಾ ಕ್ರಮಕೈಗೊಳ್ಳದ ಹಿನ್ನೆಲೆ ಕಟೌಟ್ ನೆಲಕ್ಕುರುಳಿದೆ. ಸದ್ಯ ಕಟೌಟ್‌ಗೆ ಹಾಕಿದ್ದ ಮರವನ್ನೆಲ್ಲ ಒಂದೆಡೆ ತೆಗೆದು ಹಾಕಲಾಗಿದೆ.