ಚಿಕ್ಕಮಗಳೂರು:- ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮದಿನವಾದ ಇಂದು ನಗರದ ನೇಕಾರ ಬೀದಿಯ ಶ್ರೀ ಕೋದಂಡರಾಮಚಂದ್ರ ಸ್ವಾಮಿದೇವಾಲಯದಲ್ಲಿ ಶ್ರೀ ರಾಮನವಮಿ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ರಾಮನವಮಿ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಸುಪ್ರಭಾತ ಸೇವೆ ಪುಣ್ಯಾಹ ನಾಂದಿ ಶ್ರೀ ಕೊದಂಡರಾಮಚಂದ್ರ ಸ್ವಾಮಿಗೆ ಅಭಿಷೇಕ ವಿಶೇಷ ಪೂಜೆ ಅಲಂಕಾರ ಸರ್ವತೋ ಮಂಡಲ ಪೂಜೆಗಣಪತಿ ಹೋಮ ನವಗ್ರಹ ಹೋಮ ಆಂಜನೇಯ ಹೋಮ ಶ್ರೀರಾಮ ತಾರಕ ಹೋಮ ಜರುಗಿದವು.
ಮಧ್ಯಾಹ್ನ ಪೂರ್ಣಾಹುತಿಯ ನಂತರ ಮಹಾಮಂಗಳಾರತಿ ವಸಂತ ಸೇವೆ ಸಂಜೆ ಉತ್ಸವ ಮೂರ್ತಿಯ ರಾಜಭೀದಿ ಮೆರವಣಿಗೆ ಉಯ್ಯಾಲೆ ಸೇವೆ ನಡೆದವು.
ಶ್ರೀ ರಾಮನವಮಿ ಪ್ರಯುಕ್ತ ಶ್ರೀ ಕೋದಂಡರಾಮಚಂದ್ರ ಸ್ವಾಮಿಯನ್ನು ರಜತಾಭರಣಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಅರ್ಚಕ ಕೆ ವಿ ಸತ್ಯ ಪ್ರಸನ್ನ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.










