ಬೆಂಗಳೂರು: ಇಡೀ ವಾರ ಬೆಲೆ ಏರಿಕೆ ಕಂಡಿದ್ದ ಚಿನ್ನ ಈ ವಾರ ಇಳಿಕೆಯೊಂದಿಗೆ ಆರಂಭ ಕಂಡಿದೆ. ಇಂದು ಚಿನ್ನದ ಬೆಲೆ ಗ್ರಾಂ ಗೆ 45 ರೂನಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 7,360 ರೂ ಇದ್ದದ್ದು 7,315 ರೂಗೆ ಇಳಿದಿದೆ. ಅಪರಂಜಿ ಚಿನ್ನ 8,029 ರೂನಿಂದ 7,980 ರೂಗೆ ಇಳಿದಿದೆ. ವಿದೇಶೀ ಮಾರುಕಟ್ಟೆಗಳಲ್ಲಿ ಹೆಚ್ಚಿನ ಕಡೆ ವ್ಯತ್ಯಯವಾಗಿಲ್ಲ. ಬೆಳ್ಳಿ ಬೆಲೆ ಕೆಲವಾರು ದಿನಗಳಿಂದ ಯಥಾಸ್ಥಿತಿಯಲ್ಲಿದ್ದು, ಇಂದು ಸೋಮವಾರವೂ ಅದೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್‍ನ 22 ಕ್ಯಾರಟ್ ಚಿನ್ನದ ಬೆಲೆ 73,150 ರುಪಾಯಿ ಇದೆ. 24 ಕ್ಯಾರಟ್‍ನ ಅಪರಂಜಿ ಚಿನ್ನದ ಬೆಲೆ 79,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‍ಗೆ 73,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‍ಗೆ 9,700 ರುಪಾಯಿಯಲ್ಲಿ ಇದೆ.










