ಸತತ 6ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ…

62
firstsuddi

ನವದೆಹಲಿ : ಸತತ ಆರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ದರ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದೆ. ಒಂದು ವಾರದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 4 ರೂಪಾಯಿ, ಡೀಸೆಲ್ ಬೆಲೆ 4.10 ರೂಪಾಯಿಗೆ ಏರಿಕೆ ಕಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ ಗೆ 99.41 ರೂಪಾಯಿ ಏರಿಕೆಯಾಗಿದ್ದು, ಡೀಸೆಲ್ ದರ ಲೀಟರ್ ಗೆ 90.77 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.76ರೂ. ಆಗಿದ್ದರೆ ಡೀಸೆಲ್ ಬೆಲೆ 89 ರೂ. ತಲುಪಿದೆ.

ಪಂಚರಾಜ್ಯಗಳ ಚುನಾವಣೆಯ ವೇಳೆ ಸುಮಾರು ನಾಲ್ಕು ತಿಂಗಳು ತೈಲ ಬೆಲೆಗಳಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಆಗಿರಲಿಲ್ಲ. ಆದರೆ ಪಂಚರಾಜ್ಯಗಳ ಚುನಾವಣೆ ನಡೆದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸತತವಾಗಿ ಆರು ಬಾರಿ ಏರಿಕೆಯಾಗಿದೆ. ಪ್ರತಿ ಬ್ಯಾರಲ್ ನ ಕಚ್ಚಾತೈಲ ದರ 100 ರಿಂದ 110 ಡಾಲರ್ ಗೆ ಏರಿಕೆಯಾದರೆ ಪ್ರತಿ ಲೀಟರ್ ಗೆ 15 ರಿಂದ 20 ರೂ. ಹೆಚ್ಚಳವಾಗಲಿದೆ ಎಂದು ಸಿಆರ್ ಐಎಸ್ ಐಎಲ್ ತಿಳಿಸಿದೆ.