ಸರ್ಕಾರಿ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಿ : ನಾಗರಾಜ್.

122
firstsuddi

ಕೊಟ್ಟಿಗೆಹಾರ : ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಮೂಡಿಗೆರೆ ತಹಶೀಲ್ದಾರ್ ನಾಗರಾಜ್ ಹೇಳಿದರು.

ಜಾವಳಿಯ ನಾಡಕಚೇರಿ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಎಲ್ಲಾ ವರ್ಗದ ಬಡಜನರು ಯಾವ ಸಂದರ್ಭದಲ್ಲಿ ಬೇಕಾದರೂ ನನ್ನನ್ನು ಸಂಪರ್ಕ ಮಾಡಬಹುದು. ಬಾಳೂರು ಹೋಬಳಿಯ ಅತಿವೃಷ್ಟಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಸರ್ಕಾರಕ್ಕೆ ವರದಿ ಕಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವೃದಾಪ್ಯ ವೇತನ, ವಿಧವಾ ವೇತನ, ಹಕ್ಕುಪತ್ರ, ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರದ ಚೆಕ್‍ನ್ನು ವಿತರಿಸಲಾಯಿತು. 60 ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

ಅರಣ್ಯ ಇಲಾಖೆ ಅಧಿಕಾರಿಗಳ ಗೈರು:ಆಕ್ರೋಶ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಹೊರತು ಪಡಿಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಕಾಡಾನೆ ಹಾವಳಿ, ಕಾಡ್ಗಿಚ್ಚು, ಕಾಡುಪ್ರಾಣಿಗಳ ಹಾವಳಿ ಮುಂತಾದ ಸಮಸ್ಯೆಗಳಿರುವ ಈ ಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಹರೀಶ್, ತೋಟಗಾರಿಕಾ ಇಲಾಖೆಯ ಅಧಿಕಾರಿ ರಾಮಯ್ಯ, ತಾಲ್ಲೂಕು ಸರ್ವೆ ಮೇಲ್ವಿಚಾರಕ ಮಂಜುನಾಥ್, ಬಾಳೂರು ರಾಜಸ್ವ ನಿರೀಕ್ಷಕ ಕೃಷ್ಣಕುಮಾರ್, ವೈದ್ಯಾಧಿಕಾರಿ ರವೀಲ್, ಕೃಷಿ ಅಧಿಕಾರಿ ಪುಟ್ಟಸ್ವಾಮಿ, ಗ್ರಾಮ ಲೆಕ್ಕಾಧಿಕಾರಿಗಳಾದ ಗಿರೀಶ್, ಪ್ರದೀಪ್, ಸರಿತಾ, ಮಹೇಶ್, ಓಂಕಾರಪ್ಪ, ತಾಲ್ಲೂಕು ಕಚೇರಿ ಸಿಬ್ಬಂದಿ ಗುರುರಾಜ್ ಹಾಲ್ಮಠ್, ಸ್ಥಳೀಯರಾದ ಪರೀಕ್ಷಿತ್, ರಮೇಶ್ ಕೆಳಗೂರು, ಕೇಶವಗೌಡ, ರಾಜುಮಲೆಮನೆ ಮುಂತಾದವರು ಇದ್ದರು.