ಬೆಂಗಳೂರು : ಅನರ್ಹ ಶಾಸಕಕೆ. ಸುಧಾಕರ್ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆ ಬೇಟಿ ನೀಡಿ ಸುಮಾರು ಅರ್ಧ ಘಂಟೆಗಳ ಕಾಲ ಮಾತುಕತೆ ನಡೆಸಿದ್ದು, ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ. ಸುಧಾಕರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ನಾನು ಹೋಗಿರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಅಲ್ಲದೇ ರಾಜಕೀಯದ ಬಗ್ಗೆ ಏನೂ ಚರ್ಚಿಸಿಲ್ಲ. ನನ್ನ ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ಚರ್ಚಿಸಿ ಅನುದಾನ ನೀಡುತ್ತಾರೆ ಎಂಬ ನಂಬಿಕೆ ನನ್ನಲ್ಲಿದೆ ಎಂದು ಹೇಳಿದ್ದು, ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದ ರಮೇಶ್ ಕುಮಾರ್ ಅವರ ವಿರುದ್ದ ಕಿಡಿಕಾರಿದ್ದು, ಶಾಸಕರನ್ನು ಅನರ್ಹಗೊಳಿಸಿರುವ ರಮೇಶ್ ಕುಮಾರ್ ಅವರ ಆದೇಶ ಸರಿಯಿಲ್ಲ. ಹೀಗಾಗಿ ಅವರ ಆದೇಶವನ್ನು ಪ್ರಶ್ನಿಸಿ ನಾವು ಸುಪ್ರೀಂ ಮೊರೆ ಹೋಗಿದ್ದೇವೆ. ತೀರ್ಪು ಬರಲು ನಿಧಾನವಾದರೂ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಎಂದು ಹೇಳಿದರು.










