ಸಿಎನ್‍ಜಿ, ಪಿಎನ್‍ಜಿ ದರ ತಲಾ 3 ರೂ. ಹೆಚ್ಚಳ…

59
firstsuddi

ನವದೆಹಲಿ: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ವಾಹನಗಳಿಗೆ ಬಳಸುವ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‍ಜಿ) ದರವನ್ನು ಪ್ರತಿ ಕೆ.ಜಿಗೆ ತಲಾ 3 ರೂ. ಹೆಚ್ಚಿಸಿದೆ. ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ.

ದೆಹಲಿಯಲ್ಲಿ ಸಿಎನ್ ಜಿ ದರ ಪ್ರತಿ ಕೆಜಿಗೆ 78.61 ರೂ. ಆಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ ನಲ್ಲಿ ಸಿಎನ್‍ಜಿ ಪ್ರತಿ ಕೆಜಿಗೆ 81.17 ರೂ. ಮತ್ತು ಗುರುಗ್ರಾಮದಲ್ಲಿ ಪ್ರತಿ ಕೆಜಿಗೆ 86.94 ರೂ. ಆಗಲಿದೆ.

ಸಿಎನ್ ಜಿ ಜೊತೆ ಪಿಎನ್ ಜಿ ದರ ಕೂಡ 3 ರೂ. ಏರಿಕೆ ಕಂಡು ದೆಹಲಿಯಲ್ಲಿ 53.59 ರೂ.ಗೆ ತಲುಪಿದೆ. ಈ ಮೂಲಕ 2021ರ ಆಗಸ್ಟ್ ಬಳಿಕ ಸತತ 10ನೇ ಬಾರಿ ಏರಿಕೆ ಕಂಡಂತಾಗಿದೆ.