ಸಿಡಿ ಪ್ರಕರಣ : ಅನಾರೋಗ್ಯ ಹಿನ್ನಲೆ ಎಸ್‍ಐಟಿ ತನಿಖೆಗೆ ರಮೇಶ್ ಜಾರಕಿಹೊಳಿ ಆಬ್ಸೆಂಟ್…

106
firstsuddi

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಇಂದು ವಿಚಾರಣೆಗೆ ಹಾಜರಾಗಿಲ್ಲ. ಈ ಬಗ್ಗೆ ರಮೇಶ್ ಜಾರಕಿಹೊಳಿ ಪರ ವಕೀಲರಾದ ಶ್ಯಾಮ್ ಸುಂದರ್ ಅವರು ತಮ್ಮ ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದು, ಎರಡು ದಿನಗಳ ಕಾಲ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಎಸ್‍ಐಟಿ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ಅನಾರೋಗ್ಯ ಹಿನ್ನೆಲೆ ರಮೇಶ್ ಜಾರಕಿಹೊಳಿಯವರು ಬಂದಿಲ್ಲ. ಅವರು ಎಲ್ಲಿಯೂ ಓಡಿ ಹೋಗಿಲ್ಲ.. ಈಗ ಗೋಕಾಕ್ ನಲ್ಲಿ ಇದ್ದಾರೆ. ರಮೆಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕಾದರೆ ಬೆಂಗಳೂರಿಗೆ ಬಂದು ಬಂಧಿಸಬೇಕೆಂತಿಲ್ಲ. ಗೋಕಾಕ್ ನಲ್ಲಿ ಇದ್ದರೂ ಸಹ ಅಲ್ಲಿಯೇ ಹೋಗಿ ಬಂಧಿಸಬಹುದು. ಎಂದು ವಕೀಲ ಶ್ಯಾಮ್ ಸುಂದರ್ ತಿಳಿಸಿದ್ದಾರೆ.