ಸಿಡಿ ಹಿಂದೆ ಕೇವಲ ಕಾಂಗ್ರೆಸ್ ನವರು ಮಾತ್ರ ಅಲ್ಲ, ಬಿಜೆಪಿಯವರೂ ಇದ್ದಾರೆ : ಯತ್ನಾಳ್.

162
Firstsuddi

ಬೆಂಗಳೂರು : ಸಿಡಿ ಹಿಂದೆ ಕೇವಲ ಕಾಂಗ್ರೆಸ್ ನವರು ಮಾತ್ರ ಅಲ್ಲ, ಬಿಜೆಪಿಯವರೂ ಇದ್ದಾರೆ. ಇಬ್ಬರೂ ಒಟ್ಟಿಗೆ ಸೇರಿ ಈ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಅವರು, ಕಿಂಗ್ ಪಿನ್ ವ್ಯಕ್ತಿಯ ಮಗಳ ಬರ್ತ್ ಡೇ ಪಾರ್ಟಿಗೆ ಯಾರ್ಯಾರು ಹೋಗಿದ್ದರು. ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ. ಬಿಜೆಪಿ ನಾಯಕರೂ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಅವರ ಫೋಟೋಗಳನ್ನು ಬಿಡುಗಡೆ ಮಾಡಬೇಕು. ಎಸ್ಐಟಿಯಿಂದ ನ್ಯಾಯ ಸಿಗಲ್ಲ. ಈ ಪ್ರಕರಣದಲ್ಲಿ ತುಂಬಾ ಜನರ ಕೈವಾಡವಿದೆ. ಹೀಗಾಗಿ ಸಿಬಿಐಗೆ ಪ್ರಕರಣವನ್ನು ನೀಡಬೇಕು ಎಂದು ಒತ್ತಾಯಿಸಿದರು.

ನಾನು ಮೀಸಲಾತಿ ಹೋರಾಟವನ್ನು ಮಾತ್ರ ಸ್ಥಗಿತ ಮಾಡಿದ್ದೇನೆ. ಆದರೆ ರಾಜಕಾರಣ, ಕುಟುಂಬ, ಭ್ರಷ್ಟಾಚಾರದ ವಿರುದ್ಧ ಹೋರಾಟ ಪ್ರತ್ಯೇಕವಾಗಿ ಮುಂದುವರಿಯುತ್ತದೆ. ನಾನು ನಾನು ಪಕ್ಷ ನಿಷ್ಟ ಹಾಗೂ ಮೋದಿ ಅಭಿಮಾನಿ ಎಂದು ಯತ್ನಾಳ್ ಹೇಳಿದರು.