ಸಿದ್ದರಾಮಯ್ಯ ಅವರು ಸಿಡಿ ಮಾಡಿಸುವುದರಲ್ಲಿ ಎಕ್ಸ್​​ಪರ್ಟ್​ : ಲಕ್ಷ್ಮಣ ಸವದಿ.

244
firstsuddi

ಹುಬ್ಬಳ್ಳಿ : ಸಿದ್ದರಾಮಯ್ಯ ಅವರು ಸಿಡಿ ಮಾಡಿಸುವುದರಲ್ಲಿ ಎಕ್ಸ್​​ಪರ್ಟ್ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ  ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದು ನಿಜ. ಆದರೆ ಅವರ ಆಡಿಯೋವನ್ನು ತಿರುಚಿ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಎರಡು ಸಿಡಿ ಮಾಡಿಸಿದ್ದರು. ಅದರಲ್ಲಿ ಒಂದು ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಲಿಂಗಾಯಿತರಿಲ್ಲ ಎನ್ನುವ ಆಡಿಯೋ. ಇನ್ನೊಂದು ಧರ್ಮಸ್ಥಳದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಬೀಳಲಿದೆ ಎಂದು ಹೇಳಿರುವ ಸಿಡಿ ಮಾಡಿಸಿದ್ದರು. ಸಿದ್ದರಾಮಯ್ಯ ಅವರು ಸಿಡಿ ಮಾಡಿಸುವುದರಲ್ಲಿ ಎಕ್ಸ್​​ಪರ್ಟ್. ಸಿದ್ದರಾಮಯ್ಯ ಅವರು ಮೊದಲು ಸುಳ್ಳು ಹೇಳುವುದನ್ನು ಬಿಡಲಿ ಎಂದು ತಿರುಗೇಟು ನೀಡಿದರು.