ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ : ಕೆ.ಎಸ್.ಈಶ್ವರಪ್ಪ.

96
firstsuddi

ಕಲಬುರಗಿ : ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯರ ರಕ್ತದ ಕಣಕಣದಲ್ಲಿ ಮೋಸ ಇದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪನವರು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ವೋ ಗೊತ್ತೆ ಆಗಲ್ಲ. ಅವರು ಹೆಂಡಾ ಕುಡಿದಾಗ ಒಂದು ಮಾತನಾಡುತ್ತಾರೆ. ಹೆಂಡ ಕುಡಿಯದೇ ಇದ್ದಾಗ ಒಂದು ಮಾತನಾಡುತ್ತಾರೆ. ಸಿದ್ದರಾಮಯ್ಯರ ರಕ್ತದ ಕಣಕಣದಲ್ಲಿ ಮೋಸ ಇದೆ ಎಂದರು.

ಸಿದ್ದರಾಮಯ್ಯ ಮೊದಲು ಜೆಡಿಎಸ್ ಗೆ ಮೋಸ ಮಾಡಿದ್ರು. ಬಳಿಕ ಶ್ರೀನಿವಾಸ್ ಪ್ರಸಾದ್ ಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಗೂ ಮೋಸ ಮಾಡಲು ರೆಡಿ ಆಗಿದ್ದಾರೆ. ಜಮೀರ್ ಅಹ್ಮದ್ ಅಂತವರನ್ನು ಸಿದ್ದರಾಮಯ್ಯ ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲ್ ಅಂತಹ ದೇಶ ಭಕ್ತರನ್ನು ಭಯೋತ್ಪಾದಕ ಅಂತಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.