ಸಿದ್ದರಾಮಯ್ಯ ಪರಮಾಪ್ತ ಮಲ್ಲೇಶ್ ವಿರುದ್ಧ ದೂರು ದಾಖಲು…

81
firstsuddi

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಪಿ.ಮಲ್ಲೇಶ್ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಬ್ರಾಹ್ಮಣ್ಯ, ವೇದ ಉಪನಿಷತ್ತುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮಠಾಧೀಶರನ್ನು ಕೂಡ ಅವಹೇಳನ ಮಾಡಿರುವ ಪಿ.ಮಲ್ಲೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಜಾತಿ ನಿಂದನೆ ಹಿನ್ನೆಲೆ ಐಪಿಸಿ 153ಎ, 295, 295ಎ ಸೆಕ್ಷನ್ ಗಳಲ್ಲಿ ಎಫ್ಐರ್ ದಾಖಲಿಸುವಂತೆ ಮನವಿ ಮಾಡಲಾಗಿದೆ.

ಪಿ.ಮಲ್ಲೇಶ್ ಅವರು ಭಾಷಣದಲ್ಲಿ ಹೇಳಿದ್ದೇನು? ‘ಸಿದ್ದರಾಮಯ್ಯ@75’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಆಪ್ತ ಮಲ್ಲೇಶ್ ಅವರು, ಯಾವ ಕಾರಣಕ್ಕೂ ಬ್ರಾಹ್ಮಣರನ್ನು, ಬ್ರಾಹ್ಮಣಿಕೆಯನ್ನು ನಂಬಬೇಡಿ. ದೇಶ ಹಾಳು ಮಾಡಿದ್ದೇ ವೇದ-ಉಪನಿಷತ್ತುಗಳು. ಬುದ್ಧನ ಕೈಹಿಡಿಯಿರಿ, ನಮಗೆಲ್ಲರಿಗೂ ಬುದ್ಧನಿದ್ದಾನೆ ಎಂದು ಹೇಳಿದ್ದರು.

ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ 50ರಿಂದ ಶೇ 60ಕ್ಕೆ ಹೆಚ್ಚಿಸುವಲ್ಲಿಯೂ ಬ್ರಾಹ್ಮಣರ ಕೈವಾಡವಿದೆ. ಮೊದಲಿಗೆ ಬ್ರಾಹ್ಮಣರು, ಲಿಂಗಾಯಿತರು ಮಠಗಳನ್ನು ಮಾಡಿಕೊಂಡರು. ಈಚೆಗೆ 20 ವರ್ಷಗಳಿಂದ ಗೌಡರು ಮಠ ಕಟ್ಟಿಕೊಂಡರು. ಈಗ ಎಲ್ಲ ಜಾತಿಗಳು ಮಠ ಮಾಡಿಕೊಂಡಿವೆ. ಎಷ್ಟೊಂದು ಸ್ವಾಮಿಗಳು, ಎಷ್ಟೊಂದು ಮಠಗಳು. ಎಲ್ಲರೂ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದರು.