ಬೆಂಗಳೂರು : ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ನಿರ್ಮಾಕರೊಬ್ಬರು ನಟಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಕಳೆದ 6 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ನಿರ್ಮಾಪಕನ ವಿರುದ್ಧ ನಟಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ನಿರ್ಮಾಪಕ ಸಂಗಮೇಶ್ ಪಾಟೀಲ್ ಎಂಬುವವರು 2013ರಲ್ಲಿ ಕಿರುತೆರೆ ನಟಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಹೈದರಾಬಾದ್‍ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಜ್ಯೂಸ್‍ನಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಅಲ್ಲದೇ 2014ರಲ್ಲೂ ಕೂಡಾ ಇದೇ ರೀತಿ ನಿರ್ಮಾಪಕ ನಟಿಗೆ ಕರೆ ಮಾಡಿ ಗೋವಾಗೆ ಬರುವಂತೆ ಹೇಳಿದ್ದಾರೆ. ಆದರೆ ಯುವತಿ ಗೋವಾಗೆ ತೆರಳಲು ನಿರಾಕರಿಸಿದ್ದರಿಂದ ನನ್ನ ಬಳಿ ನಿನ್ನ ನಗ್ನ ವೀಡೀಯೋಗಳು ಇವೆ. ಒಂದು ವೇಳೆ ಬರದಿದ್ದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ವೀಡಿಯೋ ವೈರಲ್ ಆಗುತ್ತದೆ ಎಂಬ ಭಯದಿಂದ ನಟಿ ಗೋವಾಗೆ ತೆರಳಿದ್ದಾರೆ. ಅಲ್ಲಿ ನಟಿಗೆ ಲೈಂಗಿಕವಾಗಿ ಕಿರುಕುಳ ನೀಡಿ ಬಳಿಕ ಮುಂಬೈಯಲ್ಲಿ 6 ಬಾರಿ ಅತ್ಯಾಚಾರ ಎಸಗಿದ್ದಾರೆ. ಘಟನೆಯ ಬಳಿಕ ಯುವತಿಗೆ ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇದನ್ನು ನಟಿಯೂ ಕೂಡಾ ಒಪ್ಪಿಕೊಂಡಿದ್ದಾರೆ. ಬಳಿಕ ನಿರ್ಮಾಪಕ ಸಂಗಮೇಶ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡ ನಟಿಗೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದು, ಬಳಿಕ ನಟಿ ಅಮೃತಹಳ್ಳಿ ಠಾಣೆಗೆ ತೆರಳಿ ನಿಮಾಪಕನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದು, ನಟಿಯ ದೂರಿನ ಮೇರೆಗೆ ಪೊಲೀಸರು ಸಂಗಮೇಶ್ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.










