ಬೀಜಿಂಗ್ : ಕೊರೊನಾ ವೈರಸ್‍ಗೆ (ಕೋವಿಡ್-19) ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 3000ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಚೀನಾ ದೇಶ ಒಂದರಲ್ಲೇ ಕೊರೊನಾ ವೈರಸ್‍ಗೆ 2,912 ಮಂದಿ ಮೃತಪಟ್ಟಿದ್ದಾರೆ ಎಂದು ಚೀನಾದ ಆರೋಗ್ಯ ಇಲಾಖೆ ತಿಳಿಸಿದೆ. ಹುಬೆ ಪ್ರಾಂತ್ಯದಲ್ಲಿ 6ಮಂದಿಯಲ್ಲಿ ಸೋಂಕು ತಗುಲಿರುವುದಾಗಿ ದೃಢಪಟ್ಟಿದ್ದು, ಚೀನಾದಲ್ಲಿ ಮಾತ್ರವಲ್ಲದೇ ಆಸ್ಟ್ರೇಲಿಯಾ, ಇಟಲಿ, ಅಮೆರಿಕಾ ಹಾಗೂ ಯೂರೋಪ್ ರಾಷ್ಟ್ರಗಳಲ್ಲೂ ಕೊರೊನಾ ವೈರಸ್ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.