ಟೆಂಪೋ ಹಾಗೂ ಬೈಕ್‍ಗಳ ನಡುವೆ ಭೀಕರ ಅಪಘಾತ-ಐವರು ಸಾವು…

288
firstsuddi

ಮುಂಬೈ ; ಟೆಂಪೋ ಹಾಗೂ ಬೈಕ್‍ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಮೃತಪಟ್ಟಿರುವ ಘಟನೆ ಪುಣೆ-ಮುಂಬೈ ಹೆದ್ದಾರಿಯ ಖಂಡಾಲಾ ಪ್ರದೇಶದಲ್ಲಿ ನಡೆದಿದೆ. ನಡೆದಿದೆ. ಮೃತರನ್ನು ನಾರಾಯಣ್ ರಾಮ್ ಗುಂಡಲೆ(27), ಅಮೋಲ್ ಬಾಲಾಜಿ ಚಿಲ್ಮೆ(29), ಪ್ರದೀಪ್ ಪ್ರಕಾಶ್ ಚೋಲೆ(31), ಅರ್ಜುನ್ ರಾಮ್ ಗುಂಡಲೆ(31) ಹಾಗೂ ಗೋವಿಂದ್ ನಲ್ವಾಡ್(35) ಎಂದು ಗುರುತಿಸಲಾಗಿದ್ದು, ಮೃತರು 3 ಬೈಕ್‍ಗಳಲ್ಲಿ 6ಮಂದಿ ಅಲಿಬಾಗ್‍ನಿಂದ ತಲೆಗಾಂವ್‍ಗೆ ತೆರಳುತ್ತಿದ್ದ ವೇಳೆ ಲೋನಾವಾಲಾದಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಐಷರ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಬಾಲಾಜಿ ಹರಿಶ್ಚಂದ್ರ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಟೆಂಪೋ ಚಾಲಕ ಪರಾರಿಯಾಗಿದ್ದು, ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ತನಿಖೆ ನಡೆಸುತ್ತಿದ್ದಾರೆ