ಸುಧಾಕರ್ ಅವರನ್ನ ಹಾಡಿ ಹೊಗಳಿದ ರಮ್ಯಾ – ಬಿಜೆಪಿ ಸೇರ್ತಾರಾ ನಟಿ?

64
firstsuddi

ಚಿಕ್ಕಬಳ್ಳಾಪುರ : ಸಜಿವ ಸುಧಾಕರ್ ನೇತೃತ್ವದಲ್ಲಿ ಜನವರಿ 7ರಿಂದ 14ರವರೆಗೆ ಅದ್ದೂರಿಯಾಗಿ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಂಸದೆ ಕಮ್ ನಟಿ ರಮ್ಯಾ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರನ್ನ ಹಾಡಿ ಹೊಗಳಿದ್ದಾರೆ. ಆದರೆ ರಮ್ಯಾ ಅವರ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ. ಈ ನಡುವೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಚರ್ಚೆ ಕೂಡ ರಾಜಕೀಯ ವಲಯದಲ್ಲಿ ಜೋರಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಮ್ಯಾ ಅವರು, ಇಡೀ ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ ಉತ್ಸವ ಸದ್ದು ಮಾಡುತ್ತಿದೆ. ಟಿವಿ ನೋಡಿದರು, ಪೇಪರ್ ಓದಿದರು ಎಲ್ಲಾ ಕಡೆ ನಿಮ್ಮದೆ ಸುದ್ದಿ. ನಾನು ಬಹಳ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದೆ, ಅವತ್ತಿಗೂ ಇವತ್ತಿಗೂ ತುಂಬಾ ವ್ಯತ್ಯಾಸವಿದೆ, ತುಂಬಾ ಬದಲಾಗಿದೆ ಎಂದರು.

ರಮ್ಯಾ ಅವರ ಮಾತಿಗೆ ಹುಚ್ಚೆದ್ದು ಕುಣಿದ ಜನರು, ಇದು ಸಚಿವ ಸುಧಾಕರ್ ಹವಾ ಎಂದು ಘೋಷಣೆ ಕೂಗುತ್ತಿದ್ದರು. ಪ್ರೇಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ ಅವರು, ಹೀರೋಗಿಂತ ಸಚಿವ ಸುಧಾಕರ್ ಅವರ ಹವಾ ಇಲ್ಲಿ ಜೋರಾಗಿದೆ. ಸುಧಾಕರ್ ಅವರು ಮೊದಲು ನಮ್ಮ ತಂದೆಯವರಿಗೆ ಪರಿಚಯ, ಆ ಬಳಿಕ ನನಗೆ ಫ್ರೆಂಡ್ ಆದ್ರು. ಇವತ್ತು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ.

ನಾವು ಎಷ್ಟೇ ಕ್ಲೋಸ್ ಆದರೂ ನಾನು ಯಾವತ್ತೂ ಈ ಮಾತನ್ನು ಹೇಳಿರಲಿಲ್ಲ. ನಿಮ್ಮ ಎಲ್ಲರ ಎದುರು ನಾನು ಇವತ್ತು ಹೇಳ್ತಿದ್ದೀನಿ, ನನಗೆ ತುಂಬಾ ಖುಷಿ ಆಗುತ್ತಿದೆ. ಫ್ರೆಂಡ್ ಆಗಿ ಹೆಮ್ಮೆ ಎನಿಸುತ್ತಿದೆ. ಏಕೆಂದರೆ ಸುಧಾಕರ್ ಅವರು ರಾಜಕೀಯ ಕುಟುಂಬದಿಂದ ಬಂದಿಲ್ಲ. ಆದರೂ ರಾಜಕೀಯಕ್ಕೆ ಬಂದು, ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಎಂದು ಹಾಡಿ ಹೊಗಳಿದ್ದಾರೆ.