ಸುಪ್ರಿಂಕೋರ್ಟ್‍ನ 9 ನೂತನ ನ್ಯಾಯಮೂರ್ತಿಗಳಿಂದ ಪ್ರಮಾಣವಚನ ಸ್ವೀಕಾರ – ಪ್ರತಿಜ್ಞಾವಿಧಿ ಬೋಧಿಸಿದ ಸಿಜೆಐ ಎನ್.ವಿ.ರಮಣ.

84
firstsuddi

ನವದೆಹಲಿ : ಸುಪ್ರಿಂಕೋರ್ಟ್‍ನ ನೂತನ ನ್ಯಾಯಮೂರ್ತಿಗಳಾಗಿ ಇಂದು 9 ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ನ ಹೆಚ್ಚುವರಿ ಕಟ್ಟಡದ ಕಾಂಪ್ಲೆಕ್ಸ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಇತಿಹಾಸದಲ್ಲಿ ಇದೇ ಮೊದಲಬಾರಿಗೆ 9 ನ್ಯಾಯಾಧೀಶರು, ಸುಪ್ರೀಂ ನ್ಯಾಯಮೂರ್ತಿಗಳಾಗಿ ಒಟ್ಟಿಗೇ ಪ್ರಮಾಣವಚನ ಸ್ವೀಕಾರ ಮಾಡಿದ್ದು, ನೂತನ ನ್ಯಾಯಮೂರ್ತಿಗಳ ಸೇರ್ಪಡೆಯೊಂದಿಗೆ ಸಿಜೆಐ ಸೇರಿದಂತೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಸುಪ್ರಿಂಕೋರ್ಟ್‍ನ ನೂತನ ನ್ಯಾಯಮೂರ್ತಿಗಳು :
• ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ
• ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್
• ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶೆ ಬಿ.ವಿ.ನಾಗರತ್ನ
• ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ
• ಕೇರಳ ಹೈಕೋರ್ಟ್ ನ್ಯಾಯಾಧೀಶ ಸಿ.ಟಿ.ರವಿಕುಮಾರ್
• ಗುಜರಾತ್ ಹೈಕೋರ್ಟ್ ನ್ಯಾಯಾಧೀಶ ಬೇಲಾ ಎಂ.ತ್ರಿವೇದಿ
• ಸಿಕ್ಕಿಂ ಮುಖ್ಯನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ
• ಮದ್ರಾಸ್ ಹೈಕೋರ್ಟ್ ಜಡ್ಜ್ ಎಂ.ಎಂ.ಸುಂದರೇಶ್
• ಹಿರಿಯ ನ್ಯಾಯವಾಧಿ ಪಿ.ಎಸ್.ನರಸಿಂಹ

ಕರ್ನಾಟಕದ ನ್ಯಾ. ಬಿ.ವಿ. ನಾಗರತ್ನ ಅವರು ಹಿರಿತನದ ಆಧಾರದ ಮೇಲೆ 2027ಕ್ಕೆ ಮುಂದಿನ ಸಿಜೆಐ ಆಗಲಿದ್ದಾರೆ. ಆ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಮಹಿಳಾ ಸಿಜೆಐ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.