ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇಂದು ಬೆಳಗಿನ ಜಾವ ಪುಲ್ವಾಮ ಜಿಲ್ಲೆಯ ಜಾಹಿದ್‍ಬಾಗ್ ಗ್ರಾಮದಲ್ಲಿ ಉಗ್ರರು ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಐಇಡಿ ಬಾಂಬ್ ಸ್ಪೋಟಿಸಿದ್ದಾರೆ. ಸೇನಾ ವಾಹನದಲ್ಲಿ 55 ರಾಷ್ಟ್ರೀಯ ರೈಫಲ್ಸ್‍ನ ಸೈನಿಕರು ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಬಾಂಬ್ ಸ್ಪೋಟದ ತೀವ್ರತೆಗೆ ಸೇನಾ ವಾಹನ ಜಖಂಗೊಂಡಿದೆ. ಬಾಂಬ್ ಸ್ಪೋಟಗೊಂಡ ಬಳಿಕ ಭದ್ರತಾ ಪಡೆಗಳು ಜಾಹಿದ್‍ಬಾಗ್ ಪ್ರದೇಶವನ್ನು ಸುತ್ತುವರಿದು ಉಗ್ರರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.










