ಸೈಕಲ್‍ನಲ್ಲೇ 25 ದೇಶ ಸುತ್ತಿ ಇದೀಗ ಭಾರತಕ್ಕೆ ಬಂದಿರುವ ಇಂಗ್ಲೆಂಡ್ ಪ್ರಜೆಗೆ ಮಂತ್ರಾಕ್ಷತೆ ಹಂಚಿದ ಮಲೆನಾಡಿಗರು…

62
firstsuddi

ಚಿಕ್ಕಮಗಳೂರು: ಇಂಗ್ಲೆಂಡ್‍ನಿಂದ ಸೈಕಲ್‍ನಲ್ಲೇ 25 ದೇಶಗಳನ್ನು ಸುತ್ತಿ ಇದೀಗ ಭಾರತಕ್ಕೆ ಬಂದಿರುವ ಪ್ರವಾಸಿಗ ಹೆರಾಲ್ಡ್ ಎಂಬವರಿಗೆ ಮಲೆನಾಡಿಗರು ಅಯೋಧ್ಯೆ ರಾಮಂದಿರದ ಮಂತ್ರಾಕ್ಷತೆಯನ್ನು ನೀಡಿದ್ದಾರೆ.

ಕೈಯಲ್ಲಿ ಓಂ ಎಂದು ಹಚ್ಚೆ ಹಾಕಿಸಿಕೊಂಡಿರುವ ಹೆರಾಲ್ಡ್, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹಾಗೂ ಅಭಿಮಾನ ಹೊಂದಿದ್ದಾರೆ. ಹೆರಾಲ್ಡ್ ಅವರು ಸೈಕಲ್ ಮೂಲಕವೇ 25 ದೇಶಗಳನ್ನು ಸುತ್ತಿದ್ದು, ಭಾರತಕ್ಕೆ 9ನೇ ಬಾರಿ ಭೇಟಿ ನೀಡಿದ್ದಾರೆ. ಅದರಂತೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೆಣಸಿನಹಾಡ್ಯದ ಜನರು ಹೆರಾಲ್ಡ್ ಅವರಿಗೆ ಆತಿಥ್ಯ ನೀಡಿದ್ದಾರೆ.

ಮಂತ್ರಾಕ್ಷತೆ ಸ್ವೀಕರಿಸಿದ ಹೆರಾಲ್ಡ್, ಅದನ್ನು ಇಂಗ್ಲೆಂಡ್​ಗೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅಲ್ಲದೆ, ಹಿಂದೂ ಧರ್ಮ, ಭಗವದ್ಗೀತೆ, ಅಯೋಧ್ಯೆ, ಶ್ರೀರಾಮನ ಬಗ್ಗೆ ಹೆರಾಲ್ಡ್​ ಅವರಿಗೆ ವಾಸೇಗೌಡ, ಸಂಪತ್ ಎಂಬುವರು ಇಂಗ್ಲಿಷ್​ನಲ್ಲೇ ಮಾಹಿತಿ ನೀಡಿದ್ದಾರೆ.