ಪಣಜಿ : ಬಿಜೆಪಿ ನಾಯಕಿ, ನಟಿ ಸೋನಾಲಿ ಪೋಗಟ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಕರ್ಲಿಸ್ ಕ್ಲಬ್ ಮಾಲೀಕ ಮತ್ತು ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ.
ಕರ್ಲೀಸ್ ರೆಸ್ಟೋರೆಂಟ್ ನ ಮಾಲೀಕ ಎಡ್ವಿನ್ ನ್ಯೂನ್ಸ್ ಮತ್ತು ಡ್ರಗ್ ಡೀಲರ್ ದತ್ತಪ್ರಸಾದ್ ಗಾಂವ್ಕರ್ ಬಂಧಿತ ಆರೋಪಿಗಳು. ಇದಕ್ಕೂ ಮುನ್ನ ಸೋನಾಲಿ ಪೋಗಟ್ ಸಾವಿನ ಪ್ರಕರಣದಲ್ಲಿ ಅವರ ಪಿಎ ಸುಧೀರ್ ಸಾಂಗ್ವಾನ್, ಸುಖ್ವಿಂದರ್ ಸಿಂಗ್ ಎಂಬುವವರನ್ನು ಬಂಧಿಸಲಾಗಿತ್ತು.
ಉತ್ತರ ಗೋವಾ ಅಂಜುನಾ ಬೀಚ್‌ನ ಪ್ರಸಿದ್ಧ ರೆಸ್ಟೋರೆಂಟ್ ನಲ್ಲಿ ಸೊನಾಲಿ ಅವರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಸಾಂಗ್ವಾನ್ ಮತ್ತು ಸಿಂಗ್ ಸೇರಿಕೊಂಡು, ಪಾನೀಯದಲ್ಲಿ ಡ್ರಗ್ಸ್ ಬೆರೆಸಿ ಅದನ್ನು ಬಲವಂತವಾಗಿ ಸೋನಾಲಿಗೆ ಕುಡಿಸಿದ್ದರು ಎಂದು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದರು. ಆರೋಪಿಗಳು ಕೂಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು.










