ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ ಎಂಬ ಮಾತುಗಳು ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಸ್ಥಳೀಯ ಆಟಗಾರರಿಗೆ RCB ಅವಕಾಶ ನೀಡಿದ್ದು ತುಂಬಾ ಕಡಿಮೆ. ಇದನ್ನೇಲ್ಲ ಗಮನಿಸಿರುವ ರಾಜ್ಯ ಸರ್ಕಾರ ಸ್ಥಳೀಯ ಆಟಗಾರರಿಗೆ ಅವಕಾಶ ಕೋಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಒತ್ತಡ ಹೇರಿದೆ.
ಕಳೆದ ಬಾರಿಯ RCB ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರು ಮಾತ್ರ ಇದ್ದದ್ದು. ಈ ಇಬ್ಬರಲ್ಲಿ ವಿಜಯಕುಮಾರ್ ವೈಶಾಕ್ 4 ಪಂದ್ಯಗಳನ್ನಾಡಿದರೆ, ಇತ್ತ ಮಹಾರಾಜ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾಂಡಗೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದ್ದರು. ಇದರ ಬೆನ್ನಲ್ಲೇ ಯುವ ಆಟಗಾರನನ್ನು ಇಡೀ ಸೀಸನ್‍ನಲ್ಲಿ ಕಾಯಿಸಿದ RCB ಫ್ರಾಂಚೈಸಿಯ ನಡೆಯ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು.
ಐಪಿಎಲ್ ಇತಿಹಾಸದಲ್ಲಿ RCB ತಂಡವು ಎಂದಿಗೂ ಸ್ಥಳೀಯ ಪ್ರತಿಭೆಗಳನ್ನು ಗುರಿಯಾಗಿಸಿಕೊಂಡಿಲ್ಲ, ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿಲ್ಲ. ಹೀಗಾಗಿಯೇ ಬೆಂಗಳೂರು ಫ್ರಾಂಚೈಸಿ ತಂಡದಲ್ಲಿ ರಾಜ್ಯದ ಆಟಗಾರರ ಕೊರತೆ ಎದ್ದು ಕಾಣುತ್ತದೆ. ಆದರೆ ಈ ಬಾರಿ RCB ಫ್ರಾಂಚೈಸಿಯ ವ್ಯವಹಾರಗಳಲ್ಲಿ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಲು ಮುಂದಾಗಿದೆ. ಇದರಿಂದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕಾರ್ಯತಂತ್ರಗಳನ್ನು ಬದಲಿಸಬೇಕಾಗಿ ಬರಬಹುದು ಎಂದು ವರದಿಗಳು ತಿಳಿಸಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಉಳಿಸಿಕೊಂಡ 6 ಆಟಗಾರರಲ್ಲಿ ಒಬ್ಬರು ಅನ್‍ಕ್ಯಾಪ್ಡ್ ಪ್ಲೇಯರ್ ಇರಲೇಬೇಕು. ಇಲ್ಲಿ RCB ತಂಡದಲ್ಲಿ ಅನ್‍ಕ್ಯಾಪ್ಡ್ ಕನ್ನಡಿಗರಾಗಿ ವಿಜಯಕುಮಾರ್ ವೈಶಾಕ್ ಹಾಗೂ ಮನೋಜ್ ಬಾಂಢಗೆ ಇದ್ದಾರೆ. ಹೀಗೆ 6 ಆಟಗಾರರನ್ನು ಉಳಿಸಿಕೊಂಡರೆ ಒಟ್ಟು 79 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಇನ್ನು ಐವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಂಡರೆ 75 ಕೋಟಿ ರೂ. ವ್ಯಯಿಸಬೇಕೆಂದು ತಿಳಿಸಲಾಗಿದೆ. ಈ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ, 120 ಕೋಟಿ ರೂಪಾಯಿಗಳಿಂದ ಕಡಿತ ಮಾಡಲಾಗುತ್ತದೆ.










