ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ-ನಟಿ ಸಂಜನಾ ಗಲ್ರಾನಿ 5 ದಿನ ಸಿಸಿಬಿ ಕಸ್ಟಡಿಗೆ…

351
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರು 5 ದಿನ ಸಿಸಿಬಿ ಕಸ್ಟಡಿಗೆ ನೀಡಿ 8ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ನಟಿ ಸಂಜನಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ನಟಿ ಸಂಜನಾ ಅವರಿಗೆ ಸೇರಿದ 3 ಮೊಬೈಲ್ ಫೊನ್‍ಗಳು ಹಾಗೂ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಸಂಜನಾ ಅವರನ್ನು ನಗರದ ವಸಂತ ನಗರದ ಬಳಿ ಇರುವ ರಿಮ್ಯಾಂಡ್ ಕೋರ್ಟ್‍ನ 8ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ ಸಿಸಿಬಿ ಪೊಲೀಸರು 8 ದಿನಗಳ ಕಾಲ ವಿಚಾರಣೆ ನಡೆಸುವ ಅಗತ್ಯವಿದೆ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡರು. ಅದರಂತೆ ನ್ಯಾಯಾಧೀಶರು 5 ದಿನಗಳ ಕಾಲ ಸಂಜನಾ ಅವರನ್ನು ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ನಟಿ ಸಂಜನಾ ಗಲ್ರಾನಿ ಅವರು ಈಗಾ ವಿಚಾರಣೆ ಎದುರಿಸುತ್ತಿರುವ ಮತ್ತೊಬ್ಬ ನಟಿ ರಾಗಿಣಿ ದ್ವಿವೇದಿ ಅವರು ಇರುವ ಸಾಂತ್ವನ ಕೇಂದ್ರದಲ್ಲೇ ಇಂದು ಇರಲಿದ್ದು, ನಾಳೆ ಸಿಸಿಬಿ ತನಿಖಾಧಿಕಾರಿಗಳಾದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು ನಟಿಯರ ವಿಚಾರಣೆಯನ್ನು ಚುರುಕುಗೊಳಿಸಲಿದ್ದಾರೆ.