ಹಾಸನ : ವಿದ್ಯುತ್ ತಂತಿ ಸ್ಪರ್ಷಿಸಿ 4 ವರ್ಷದ ಮಗು ಸಾವು…

137
firstsuddi

ಹಾಸನ : ಮಹಡಿಯ ಮೇಲೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಸುಷ್ಮಿತಾ ಹಾಗೂ ಪ್ರಕಾಶ್ ದಂಪತಿ ಪುತ್ರ ಧನುಷ್(4) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಮಗು ನಿನ್ನೆ ಸಂಜೆ ಮಹಡಿಯ ಮೇಲೆ ಆಟವಾಡಲು ತೆರಳಿದ್ದು, ಈ ವೇಳೆ ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವನ್ನು ರಕ್ಷಿಸಲು ತೆರಳಿದ್ದ ಮನೆಯ ಮಾಲೀಕರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅರಕಲಗೂಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.