ಹಠ ಮಾಡದೇ ಮುಷ್ಕರ ಕೈ ಬಿಡಿ : ಬಿಎಸ್ ವೈ ಮನವಿ…

174
firstsuddi

ಬೆಳಗಾವಿ : ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಎಂಟು ಬೇಡಿಕೆ ಈಡೇರಿಸಿದ ಮೇಲೂ ಸಾರಿಗೆ ನೌಕರರು ಹಠ ಮಾಡುವುದು ಸರಿಯಲ್ಲ, ಯಾರದ್ದೋ ಮಾತು ಕೇಳಿಕೊಂಡು ಮುಷ್ಕರ ಮಾಡಬೇಡಿ. ಕೋವಿಡ್‌ನಿಂದ ಇಲಾಖೆ ನಷ್ಟದಲ್ಲಿದ್ದರೂ ನೌಕರರಿಗೆ ತೊಂದರೆಯಾಗಬಾರದೆಂದು ಪೂರ್ಣ ಸಂಬಳ ಕೊಟ್ಟಿದ್ದೇವೆ. ದಯಮಾಡಿ ಹಠವನ್ನು ಬಿಡಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತದೆ. ಶೇ. 8ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಹಠ ಮಾಡದೇ ಮುಷ್ಕರ ಕೈ ಬಿಡಬೇಕು. ಕುಳಿತು ಮಾತುಕತೆ ಮಾಡೋಣ ಎಂದು ಸಿಎಂ ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.