ಹವಾಮಾನ ವೈಪರೀತ್ಯ – ರವಿ ಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ…

51
firstsuddi

ಚೆನ್ನೈ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ತಮಿಳುನಾಡಿನ ಈರೋಡ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಬುಡಕಟ್ಟು ಕುಗ್ರಾಮ ಉಕಿನಿಯಂನಲ್ಲಿ ಇಂದು ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ರವಿಶಂಕರ್ ಮತ್ತು ಇತರ ಮೂವರು, ಇಬ್ಬರು ಸಹಾಯಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ.

ತಿರುಪುರದಿಂದ ಗುರೂಜಿ ಬೆಂಗಳೂರಿಗೆ ಖಾಸಗಿ ಹೆಲಿಕಾಪ್ಟರ್ ನಲ್ಲಿ 10:30ರ ಸುಮಾರಿಗೆ ಹಾರಾಟ ಆರಂಭಿಸಿದ ಕೆಲ ಹೊತ್ತಿನಲ್ಲೇ ಹವಾಮಾನ ವೈಪರೀತ್ಯದಿಂದ ಪೈಲಟ್ ಹೆಲಿಕಾಪ್ಟರ್ ನ್ನು ಉಕಿನಿಯಂನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ಕಡಂಬೂರು ಪೊಲೀಸ್ ಇನ್ಸ್‌ಪೆಕ್ಟರ್‌ ಸಿ.ವಡಿವೇಲ್ ಕುಮಾರ್ ತಿಳಿಸಿದ್ದಾರೆ.