ಹಾಸನ : ನನ್ನನ್ನು ಪೊಲೀಸರು ಬಂಧಿಸಲಿ, ಜೈಲಿನಲ್ಲಿ ಊಟನಾದರು ಸಿಗುತ್ತದೆ : ಸರ್ಕಾರದ ಕ್ರಮಗಳ ಬಗ್ಗೆ ರೇವಣ್ಣ ವ್ಯಂಗ್ಯ…

198
firstsuddi

ಹಾಸನ : ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಸ್ಕ್ ಧರಿಸದೆ ಹೊರಗೆ ಹೋಗುತ್ತೇನೆ. ನನ್ನನ್ನು ಬೇಕಾದರೆ ಬಂಧಿಸಲಿ. ಜೈಲಿನಲ್ಲಿ ಊಟನಾದರು ಸಿಗುತ್ತದೆ ಎಂದು ವ್ಯಂಗ್ಯವಾಡಿದ್ದು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಹಾಗೆ ದೇಶದ ಜನತೆ ಪಾಲಿಸಿದ್ದಾರೆ. ಅವರು ರಾಷ್ಟ್ರದ ದೊರೆ, ಅವರು ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚುವುದಕ್ಕೆ ಹೇಳಿದರು ಹೆಚ್ಚೆದೆವು. ಕ್ಲಾಪ್ ಮಾಡಿ ಅಂದರು ಮಾಡಿದ್ದೇವೆ. ಆದರೆ ಈಗ ನಮ್ಮ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ನೀಡಲಿ. ರಾಜ್ಯದ ಜನತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿರುವ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಮುಖ್ಯಮಂತ್ರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ನಾವು ತೋರಿಸುತ್ತೇವೆ. ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈ ಜೋಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.