ಹಾಸನ : ರೌಡಿ ಶೀಟರ್ ಗಳಿಗೆ ಹಾಸನ ನೂತನ ಎಸ್ಪಿ ರಾಮ್ ನಿವಾಸ್ ಸೆಪೆತ್ ಖಡಕ್ ವಾರ್ನಿಂಗ್…

503

ಹಾಸನ : ಸಕಲೇಶಪುರ ಪಟ್ಟಣದಲ್ಲಿ ಕರೆದಿದ್ದ ರೌಡಿ ಲಿಸ್ಟ್ ಪೇರೇಡ್‍ನಲ್ಲಿ 30ಕ್ಕೂ ಹೆಚ್ಚು ರೌಡಿ ಶೀಟರ್‍ಗಳಿಗೆ ನೂತನ ಎಸ್ಪಿ ರಾಮ್ ನಿವಾಸ್ ಸೆಪೆತ್ ಅವರು ಖಡಕ್ ವಾರ್ನಿಂಗ್ ಮಾಡಿದ್ದು, ಏಯ್ ಏನೋ ನಿಂದು? ಈಗಾ ಮತ್ತೆ ಗಲಾಟೆ ಮಾಡ್ತಿದಿಯಾ? ಇಲ್ಲಾ ತಾನೆ? ಮಾಡಿದ್ರೆ ಅಷ್ಟೇ..ಹಾಂ ನ್ಯಾಯಯುತವಾಗಿ ಬದುಕಿದರೆ ರೌಡಿ ಲಿಸ್ಟ್‍ನಿಂದ ಕೈಬಿಡುತ್ತೇವೆ. ಶಾಂತಿ ಕದಡುವ ಕೆಲಸ ಮಾಡಿದರೆ ಸುಮ್ಮನೆ ಬಿಡಲ್ಲ ಎಂದು ತಾಕೀತು ಮಾಡಿದ್ದು, ಇನ್ನು ಮುಂದೆ ಅಪರಾದ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.