ಹಾಸನ : ಸೇತುವೆಯಿಂದ ಜಿಗಿದು ಹೇಮಾವತಿ ನದಿ ನೀರಿನಲ್ಲಿ ಕೊಚ್ಚಿ ಹೋದ ಮೂವರು ಯುವಕರು…

286
firstsuddi

ಹಾಸನ : ಸೇತುವೆಯಿಂದ ಜಿಗಿದು ಹೇಮಾವತಿ ನದಿ ನೀರಿನಲ್ಲಿ ಮೂವರು ಯುವಕರು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಆಲೂರು ತಾಲ್ಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ. ಭೀಮರಾಜ್(27), ಮನು(27) ಮತ್ತು ರತನ್(22) ನೀರಿನಲ್ಲಿ ಕೊಚ್ಚಿ ಹೋದ ಯುವಕರು ಎಂದು ಗುರುತಿಸಲಾಗಿದ್ದು, ಹಬ್ಬವಿದ್ದ ಕಾರಣ ಇಂದು ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ ಯುವಕರು ತಮ್ಮ ಖುಷಿಗಾಗಿ ಸೇತುವೆ ಮೇಲಿಂದ ಜಿಗಿದಿದ್ದು, ನದಿ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ನೀರಿನ ಸೆಳೆತಕ್ಕೆ ಮೂವರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.