ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಅಮಾನತು…

69
firstsuddi

ದಕ್ಷಿಣ ಕನ್ನಡ : ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜ್ ನಲ್ಲಿ 6 ವಿದ್ಯಾರ್ಥಿನಿಯರು ಕಾಲೇಜ್ ಗೆ ಹಿಜಾಬ್ ಧರಿಸಿ ಬಂದಿದ್ದಾರೆ. ಯಾವುದೇ ಕಾರಣಕ್ಕೂ ತರಗತಿಗೆ ಹಿಜಾಬ್ ಧರಿಸಿಕೊಂಡು ಬರಬಾರದೆಂಬ ಸರ್ಕಾರದ ಆದೇಶ ಹಾಗೂ ಹೈಕೋರ್ಟ್ ತೀರ್ಪನ್ನು ಪಾಲಿಸದೆ ಪದೇ ಪದೇ ಆದೇಶ ಉಲ್ಲಂಘಿಸುತ್ತಿದ್ದರು. ಇದೀಗ 6 ಮಂದಿ ವಿದ್ಯಾರ್ಥಿನಿಯರನ್ನು ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಮಾನತುಗೊಂಡಿರುವ ಆರು ವಿದ್ಯಾರ್ಥಿನಿಯರು ನಿತ್ಯ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದರು. ಹಲವು ಬಾರಿ ಕಾಲೇಜು ಸಿಬ್ಬಂದಿ ತಿಳಿ ಹೇಳಿದ್ದರು. ಆದರೂ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಕಾಲೇಜಿನಲ್ಲಿ ಸಂಘರ್ಷವಾಗುವ ಸಾಧ್ಯತೆ ಹಿನ್ನಲೆ ಸಭೆ ನಡೆಸಿ ವಿದ್ಯಾರ್ಥಿಯರನ್ನು ಅಮಾನತುಗೊಳಿಸಲಾಗಿದೆ.

ಹಿಜಾಬ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಹಿಜಾಬ್ ವಿವಾದದ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿತ್ತು. ಮಾರ್ಜ್ 15ರಂದು ಈ ಬಗ್ಗೆ ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪು ಪ್ರಕಟಿಸಿತ್ತು. ಹಿಜಾಬ್ ಇಸ್ಲಾಂನಲ್ಲಿನ ಅತ್ಯಗತ್ಯ ಆಚರಣೆಯ ಭಾಗವಲ್ಲ ಎಂದಿರುವ ನ್ಯಾಯಪೀಠ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರದ ಜತೆಗೆ ಹಿಜಾಬ್ ಧರಿಸುವುದನ್ನು ನಿಷೇಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.