ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ- ಹೇಳಿಕೆ ಬದಲಿಸಿದ್ರಾ ಸಿಎಂ?

58
firstsuddi

ಮೈಸೂರು: ಹಿಜಾಬ್ ನಿಷೇಧ ಆದೇಶ ವಾಪಸ್ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೇಳಿಕೆ ಬದಲಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

ಈ ಸಂಬಂಧ ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಿಜಾಬ್ ನಿಷೇಧ ಆದೇಶ ವಾಪಸ್‌ಗೆ ಇನ್ನೂ ತೀರ್ಮಾನಿಸಿಲ್ಲ. ಯಾರೋ ಪ್ರಶ್ನೆ ಕೇಳಿದ್ರು. ಆಗ ಆದೇಶ ವಾಪಸ್ಸಿಗೆ ಯೋಚನೆ ಮಾಡ್ತಿದ್ದೀವಿ ಅಂತಷ್ಟೇ ಹೇಳಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಿಸ್ತೀವಿ ಎಂದು ಹೇಳಿದ್ದಾರೆ.

ಈ ಮೂಲಕ ಭಾರೀ ವಿವಾದದ ಬಳಿಕ ಸಿಎಂ ಎಚ್ಚೆತ್ತುಕೊಂಡು ಇಂದು ಉಲ್ಟಾ ಹೊಡೆದ್ರಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಬಳಿಕ ಹಿಜಾಬ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿಎಂ ಮತ್ತೊಂದು ವಿವಾದದಲ್ಲಿ ಸಿಲುಕಿದ್ರಾ ಅನ್ನೋ ಅನುಮಾನವೂ ಮೂಡಿದೆ.