ಹುಬ್ಬಳ್ಳಿ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಶೇರೆವಾಡ ಟೋಲ್ ಬಳಿ ನಡೆದಿದೆ.
ಮೃತ ಬೈಕ್ ಸವಾರರ ಗುರುತು ಪತ್ತೆಯಾಗಿಲ್ಲ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ಗಳು ಸಂಪೂರ್ಣವಾಗಿ ನಜ್ಜುಗಜ್ಜಾಗಿವೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕುಂದಗೋಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.










