ಹೆತ್ತ ತಾಯಿಯನ್ನೇ ಕೊಂದ ಕೊಲೆಗಾತಿ ಅಂದರ್…!

229
firstsuddi

ಬೆಂಗಳೂರು : ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಅಮೃತಾಳನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ. ಫೆ.1ರಂದು ಆರೋಪಿ ಅಮೃತಾ ತನ್ನ ತಾಯಿಯನ್ನು ಕೊಲೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದರು. ಇಬ್ಬರು ಅಂಡಮಾನ್ ನಿಕೋಬಾರ್​ನ ​ಪೋರ್ಟ್ ಬ್ಲೇರ್​ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯನ್ನು ತಿಳಿದ ಕೆ.ಆರ್. ಪುರಂನ ಇನ್ಸ್​​ಪೆಕ್ಟರ್ ಅಂಬರೀಷ್ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸಿ ಆರೋಪಿಗಳಾದ ಅಮೃತಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.