ಹೈದರಾಬಾದ್ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ, ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈವರೆಗೆ 11 ಮಂದಿ ಬಲಿಯಾಗಿದ್ದಾರೆ. ಹೈದರಾಬಾದ್ ಬಳಿಯ ರಂಗಾರೆಡ್ಡಿ ಜಿಲ್ಲೆ ಇಬ್ರಾಹಿಂ ಪಟ್ಟಣದ ಮಲ್ಲಶೆಟ್ಟಿ ಗೂಡಾದಲ್ಲಿ ಭಾರಿ ಮಳೆಗೆ ಮನೆ ಕುಸಿದು ಬಿದ್ದು ಮನೆಯಲ್ಲಿ ಮಲಗಿದ್ದ ತಾಯಿ ಮಗಳು ಮೃತಪಟ್ಟಿದ್ದಾರೆ.
ಹಾಗೂ ಹೈದರಾಬಾದ್‍ನ ಹಳೆಬಸ್ತಿ ಪ್ರದೇಶದಲ್ಲಿ ಮನೆ ಮೇಲೆ ಬಂಡೆಕಲ್ಲು ಉರುಳಿಬಿದ್ದು 2 ಮನೆಗಳು ಕುಸಿದು ಬಿದ್ದು, ಮನೆಯಲ್ಲಿದ್ದ ಮೂವರು ಮಕ್ಕಳು ಸೇರಿ 9 ಮಂದಿ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಂದ್ರಾಯನ ಗುಟ್ಟಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.










