ಹೊಸಪೇಟೆ : ಮರಿಯಮ್ಮನಹಳ್ಳಿಯ ಜೆಸ್ಕಾಂ ಕಛೇರಿ ಆವರಣದಲ್ಲಿ  ವಿದ್ಯುತ್ ಮಸೂದೆ ತಿದ್ದುಪಡಿ ಹಾಗೂ ಕಂಪನಿಯ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ…

148

ಹೊಸಪೇಟೆ, : ಕೇಂದ್ರ ಸರ್ಕಾರ ಎಸ್ಕಾಂ ಕಂಪನಿಗಳನ್ನು ಖಾಸಗೀಕರಣ ಹಾಗೂ ವಿದ್ಯುತ್ ಮಸೂದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಜೆಸ್ಕಾಂ ನೌಕಕರು ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮಂಗಳವಾರ ಮರಿಯಮ್ಮನಹಳ್ಳಿಯ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಜೆಸ್ಕಾಂ ಶಾಖಾಧಿಕಾರಿ, ಹೆಚ್ ವೆಂಕಟೇಶ ಮಾತನಾಡಿ, ವಿದ್ಯುತ್ ಮಸೂದೆ ತಿದ್ದುಪಡಿ ಮಾಡುವುದರಿಂದ ಇಲಾಖೆಯ ಖಾಸಗೀಕರಣವಾಗಲಿದೆ. ಇದರಿಂದಾಗಿ ಸರಕಾರಗಳಿಂದ ಸಿಗುವ ಸೌಲಭ್ಯಗಳು ನೌಕರರಿಗೆ ದೊರೆಯುವುದಿಲ್ಲ, ಖಾಸಗಿ ಕಂಪನಿಗಳು ಎಸ್ಕಾಂಗಳನ್ನು ಗುತ್ತಿಗೆ ಪಡೆದರೇ, ಜನ ಸಾಮಾನ್ಯರಿಗೆ ಕೈಗೆಟುಕದಷ್ಟು ವಿದ್ಯುತ್ ದುಬಾರಿಯಾಗಲಿದೆ ಎಂದರು.
ರೈತರಿಗೆ ಈಗ ದೊರೆಯುವ ಉಚಿತ ವಿದ್ಯುತ್ ಸಿಗುವುದಿಲ್ಲ. ಇದರಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿ, ರೈತ ಬೀದಿ ಪಾಲಾಗುತ್ತಾನೆ. ಬಡವರಿಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಮೇಲೂ ಶುಲ್ಕ ವಿಧಿಸುತ್ತಾರೆ ಎಂದು ವಿವರಿಸಿದರು. ಅಲ್ಲದೇ ಇದರಿಂದ ಸಾಮಾನ್ಯ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳಲಿದೆ. ಸರ್ಕಾರ ಕೆಲ ಪ್ರದೇಶಗಳನ್ನು ಮಾತ್ರ ಖಾಸಗೀಕರಣ ಮಾಡಲಾಗುವುದು ಎಂದು ಹೇಳಿತ್ತು. ಆದರೆ ಈಗ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಈಗ ಏಕಾಏಕಿ ತಿದ್ದುಪಡಿಯನ್ನು ಮಾಡಿ, ದೇಶದ ಎಲ್ಲಾ ರಾಜ್ಯಗಳಲ್ಲಿ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಲು ಹೊರಟಿದೆ. ಕೂಡಲೇ ತಿದ್ದುಪಡಿಯನ್ನು ಹಿಂಪಡೆಯಬೇಕು. ಇಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಖಾಸಗೀಕರಣದಿಂದಾಗಿ ಗುತ್ತಿಗೆದಾರ ಕಂಪನಿಗಳ ಮೂಲಕ ಪ್ರಸ್ತುತ ನೌಕರರಿಗೆ ಸೇವಾ ಜೇಷ್ಟತೆ ಆಧಾರದಲ್ಲಿ ಪಿಂಚಣಿ, ವೇತನ ಹೆಚ್ಚಳ ಕಡಿತವಾಗಬಹುದಲ್ಲದೇ ಸೇವಾ ಭದ್ರತೆಯ ಖಾತರಿ ಇಲ್ಲದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ, ಮಲ್ಲೇಶಪ್ಪ, ಪ್ರಸಾದ್, ವಿನೋದ್, ಅರುಣ್, ಮಾರುತಿ, ರಾಘವೇಂದ್ರ, ನಾಗರಾಜ, ಚೆನ್ನಬಸಯ್ಯ ಸ್ವಾಮಿ, ಕೃಷ್ಣ, ರಾಮಸ್ವಾಮಿ, ಪರಮೇಶ್ವರ, ರಾಮಮಲಿಸ್ವಾಮಿ ಹಾಗೂ ಇತರರು ಇದ್ದರ. ಇನ್ನಿತರರಿದ್ದರು.