1 ಗಂಟೆ 25 ನಿಮಿಷಗಳ ಕಾಲ ಅಮೆರಿಕಾದ ಅಧ್ಯಕ್ಷರಾಗಿದ್ದ ಕಮಲಾ ಹ್ಯಾರಿಸ್…

76
firstsuudi

ವಾಷಿಂಗ್ಟನ್ : ಅಮೆರಿಕಾದ ಉಪಾಧ್ಯೆಕ್ಷೆ ಕಮಲಾ ಹ್ಯಾರಿಸ್ ಅವರು ಒಂದು ಗಂಟೆ 25 ನಿಮಿಷಗಳ ಕಾಲ ಅಮೆರಿಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ನಿನ್ನೆ ಶ್ವೇತಭವನ ತಿಳಿಸಿದೆ.

ಕೊಲೊನೋಸ್ಕೋಪಿ ಪರೀಕ್ಷೆ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಅರಿವಳಿಕೆ ಔಷಧಿಯನ್ನು ನೀಡಲಾಗಿತ್ತು. ಹೀಗಾಗಿ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಲ್ಪಾವಧಿಗೆ ಅಧಿಕಾರ ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದರು. ಈ ವೇಳೆ ಉಪಾಧ್ಯಕ್ಷೆ ವೆಸ್ಟ್ ವಿಂಗ್ ನಲ್ಲಿರುವ ಅವರ ಕಚೇರಿಯಲ್ಲೇ ಕಾರ್ಯನಿರ್ವಹಿಸಿದರು.

57 ವರ್ಷದ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಬೆಳಗ್ಗೆ 10.10ರಿಂದ 11.35ರವರೆಗೆ ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್ ಕೂಡ ಕೊಲನೋಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಇದೀಗ ಜೋ ಬೈಡನ್ ಕೂಡ 1 ಗಂಟೆ 25 ನಿಮಿಷ ಕಾಲ ಕಮಲಾ ಹ್ಯಾರಿಸ್ಗೆ ಅಧಿಕಾರ ಹಸ್ತಾಂತರಿಸಿದ್ದರು.