1 ಸಾವಿರ ರೂಪಾಯಿಗಾಗಿ ಇಬ್ಬರು ಪ್ರಾಣ ಸ್ನೇಹಿತರ ಕೊಲೆ.

35

ನಿಜಾಮಾಬಾದ್: ಕೇವಲ 1 ಸಾವಿರ ರೂಪಾಯಿಗಾಗಿ ಇಬ್ಬರು ಪ್ರಾಣ ಸ್ನೇಹಿತರ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಒಂದು ಕೊಲೆಯನ್ನು ಮುಚ್ಚು ಹಾಕಲು ಹೋಗಿ ಮತ್ತೊಂದು ಕೊಲೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಜೋಡಿ ಹತ್ಯೆ ಆರೋಪಿಗಳನ್ನು ಬಂಧಿಸಿರುವುದಾಗಿ ನಿಜಾಮಾಬಾದ್ ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದಿಯಾ ಕಾಲೋನಿಯ ರಿಯಾಜ್ ಖಾನ್ ಮತ್ತು ಅಮರ್ ಖಾನ್ ಬಂಧಿತ ಆರೋಪಿಗಳು. 1,000 ರೂಪಾಯಿಗಾಗಿ ನಡೆದ ಜೋಡಿ ಹತ್ಯೆ ಇದಾಗಿದ್ದು, ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸಿಪಿ ರಾಜಾ ವೆಂಕಟ್ ರೆಡ್ಡಿ ತಿಳಿಸಿದರು. ನಿಜಾಮಾಬಾದ್‍ನ ಎಸಿಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ವರದಿ ನೀಡಿದ ಎಸಿಪಿ, ಬಂಧಿತ ಆರೋಪಿಗಳಾದ ಅಮರ್ ಖಾನ್ ಮತ್ತು ರಿಯಾಜ್ ಖಾನ್‍ನನ್ನು ಅನುಮಾನದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆದು ವಿಚಾರಿಸಿದಾಗ ಎರಡೂ ಕೊಲೆಯನ್ನು ತಾವೇ ಮಾಡಿರುವುದಾಗಿ ಇಬ್ಬರೂ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.