1,000 ಬಾಯ್‌ಫ್ರೆಂಡ್ಸ್ ಹೊಂದಿರುವ ಯುವತಿ- ಒಂದು ಗಂಟೆ ಡೇಟ್‍ಗೆ 5,000!

89
firstsuddi

ಟಿಬಿಲಿಸಿ: ಯುವತಿಯೊಬ್ಬಳು 1,000 ಬಾಯ್‍ಫ್ರೆಂಡ್‍ಗಳನ್ನು ಹೊಂದಿದ್ದು, ಅವರೊಂದಿಗೆ ಡೇಟ್ ಮಾಡಲು ಗಂಟೆಗೆ 5,000 ರೂ. ಪಡೆಯುವ ಮೂಲಕ ಸುದ್ದಿಯಾಗಿದ್ದಾಳೆ.

ಜಾರ್ಜಿಯಾದ ಕಮ್ಮಿಂಗ್‌ನ 23 ವರ್ಷದ ಯುವತಿ ಕ್ಯಾರಿನ್ ಮಾರ್ಜೋರಿ ಈ ರೀತಿ ಬಾಯ್‍ಫ್ರೆಂಡ್‍ಗಳನ್ನು ಹೊಂದಿರುವಾಕೆ. ಕ್ಯಾರಿನ್ ಮಾರ್ಜೋರಿ ಸ್ನ್ಯಾಪ್ ಚಾಟ್‍ನಲ್ಲಿ 1.8 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾಳೆ.

ಈಕೆ 1,000 ಬಾಯ್‍ಫ್ರೆಂಡ್‍ಗಳನ್ನು ಹೊಂದಿದ್ದು, ಆ ಎಲ್ಲಾ ಬಾಯ್‍ಫ್ರೆಂಡ್‍ಗಳನ್ನು ಭೇಟಿ ಆಗಲು ನಿಮಿಷಕ್ಕೆ 1 ಡಾಲರ್ (80 ರೂ.) ಶುಲ್ಕ ವಿಧಿಸುತ್ತಿದ್ದಾಳೆ. ಗೆಳೆಯರ ಜೊತೆ ಡೇಟಿಂಗ್ ಮಾಡಲು ಎಐ ಕ್ಲೋನ್ ಎಂಬ ಆ್ಯಪ್ ಅನ್ನು ಮಾಡಿಕೊಂಡಿದ್ದಾಳೆ. ಈ ಮೂಲಕ ಗೆಳೆಯರು ಅವಳ ಜೊತೆ ಡೇಟಿಂಗ್ ಮಾಡಲು ಸಮಯವನ್ನು ತೆಗೆದುಕೊಳ್ಳಬಹುದಾಗಿದೆ.

ಎಐ ಆ್ಯಪ್ ಮೂಲಕವಾಗಿ ಬಳಕೆದಾರರಿಗೆ ಕ್ಯಾರಿನ್ ಅನೇಕ ರೀತಿಯ ಆಯ್ಕೆಗಳಿರುತ್ತವೆ. ಅದರಲ್ಲಿ ಎಲ್ಲ ಆಯ್ಕೆಗೂ ಒಂದೊಂದು ರೀತಿಯ ದರವನ್ನು ಫಿಕ್ಸ್ ಮಾಡಿದ್ದಾಳೆ. ಈ ಆ್ಯಪ್ ನಲ್ಲಿ ಆಕೆ ಇರುವ ಪ್ರದೇಶವನ್ನು ಗುರುತಿಸಲು ಮತ್ತು ಲೈಂಗಿಕ ಕ್ರಿಯೆಯನ್ನು ನಡೆಸಲು ಇನ್ನೂ ಅನೇಕ ರೀತಿ ಆಯ್ಕೆಗಳು ಇವೆ ಎಂದು ಹೇಳಲಾಗುತ್ತಿದೆ.