101 ವರ್ಷಗಳ ದಾಖಲೆಯನ್ನೇ ಮುರಿದ ಭಾರೀ ಮಳೆ.

34

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಸುರಿದ ಭಾರಿ ಮಳೆ 101 ವರ್ಷಗಳ ದಾಖಲೆಯನ್ನೇ ಮುರಿದಿದ್ದು, ಈ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ವರದಿ ನೀಡಲಾಗಿದೆ. ದೆಹಲಿಯಲ್ಲಿ ಶನಿವಾರ ಬೆಳಗ್ಗೆ 8.30 ರವರೆಗೆ ಭಾರಿ ಮಳೆ ಸುರಿದಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 41.2 ಮಿಲಿಮೀಟರ್ ಮಳೆಯಾಗಿದ್ದು, ಇದು ಡಿಸೆಂಬರ್‍ನಲ್ಲಿ ಕಳೆದ 101 ವರ್ಷಗಳಲ್ಲಿ ಸುರಿದ ಒಂದು ದಿನದ ಅತಿ ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಡಿ.3 ರಂದು ಒಂದೇ ದಿನದಲ್ಲಿ 75.7 ಮಿಲಿಮೀಟರ್ ಮಳೆಯಾಗಿತ್ತು. 1901 ರಲ್ಲಿ ಮಳೆ ಪ್ರಮಾಣದ ದಾಖಲೆಗಳ ಸಂಗ್ರಹ ಪ್ರಾರಂಭವಾದಾಗಿನಿಂದ ಡಿ. 2024 ರ ಮಳೆಯು ಮಾಸಿಕ ಮಳೆಯ ವಿಚಾರದಲ್ಲಿ 5ನೇ ಅತಿ ಹೆಚ್ಚಿನ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಸಫ್ದಜರ್ಂಗ್ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಇದು 1901 ರ ನಂತರ ಸಫ್ದಜರ್ಂಗ್‍ನಲ್ಲಿ ಸುರಿದ 2ನೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಶನಿವಾರ ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಆಗಿದ್ದು, ಹವಾಮಾನ ಇಲಾಖೆಯು ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಿದ್ದರು. ಹಾಗೆಯೇ ಹಳದಿ ಅಲರ್ಟ್ ಅನ್ನೂ ಕೂಡ ಹೊರಡಿಸಿದೆ. ಪಶ್ಚಿಮದ ಸಕ್ರಿಯ ವಾಯುಭಾರ ಕುಸಿತದ ಪರಿಣಾಮ ದೆಹಲಿ-ಎನ್‍ಸಿಆರ್ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಹಗುರದಿಂದ ಮಧ್ಯಮ ಮಳೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದಾರೆ. ಹಾಗೆಯೇ ಶನಿವಾರ ಕನಿಷ್ಠ ತಾಪಮಾನವು 12.7 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದ್ದು, ಇದು ಋತುವಿನ ಸರಾಸರಿಗಿಂತ 6 ಡಿಗ್ರಿ ಹೆಚ್ಚಾಗಿದೆ ಎಂದು ವರದಿ ತಿಳಿಸಲಾಗಿದೆ.