ಕಲಬುರಗಿ: ಬ್ಲೂವೇಲ್ ಗೇಮ್ ಗೆ ಬಲಿಯಾಗಿ 12 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಲಕ್ಷ್ಮಿ ಲೇಔಟ್ ನಲ್ಲಿ ನಡೆದಿದ್ದು, ಸೇಂಟ್ ಮೇರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಸಮರ್ಥ್(12) ಆತ್ಮಹತ್ಯೆ ಮಾಡಿಕೊಂಡ ಬಾಲಕ .ಕಳೆದ ಕೆಲ ದಿನಗಳಿಂದ ಓದುವುದನ್ನು ಬಿಟ್ಟು ಮಾನಸಿಕವಾಗಿ ಖಿನ್ನತೆಗೆ ಒಳಗಾದಂತೆ ವರ್ತಿಸುತ್ತಿದ್ದ ಎನ್ನಲಾಗಿದ್ದು, ಈತ ತನಗೆ ಪಾನಿಪೂರಿ ಬೇಕೆಂದು ತಾಯಿಯೊಬ್ಬರೇ ಮನೆಯಲ್ಲಿದ್ದ ವೇಳೆ ಹಠ ಮಾಡಿ ತಾಯಿಯನ್ನು ಪಾನಿಪುರಿ ತರಲು ಕಳುಹಿಸಿ, ನಂತರ ಸಮರ್ಥ್ ಬ್ಲೂವೇಲ್ ಗೇಮ್ ನ ಅಂತಿಮ ಟಾಸ್ಕ್ ನಂತೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದ್ದು ,ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










