ನವದೆಹಲಿ : ಕೇಂದ್ರ ಸರ್ಕಾರ 2022ರ ಜನವರಿ 3 ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದಾಗಿ ಘೋಷಿಸಿದ್ದು, ಇದಕ್ಕಾಗಿ ಜನವರಿ 1ರಿಂದ ಕೋವಿನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೋವಿನ್ ಪ್ಲಾಟ್ ಫಾರ್ಮ್ ಮುಖ್ಯಸ್ಥ ಡಾ. ಆರ್.ಎಸ್. ಶರ್ಮಾ ಅವರು ತಿಳಿಸಿದ್ದಾರೆ.
ನಾವು ನೋಂದಣಿಗಾಗಿ ಹೆಚ್ಚುವರಿ (10ನೇ ತರಗತಿ) ಗುರುತಿನ ಚೀಟಿಯನ್ನು ಸೇರಿಸಿದ್ದೇವೆ. ವಿದ್ಯಾರ್ಥಿಗಳ ಗುರುತಿನ ಚೀಟಿ ಏಕೆಂದರೆ ಕೆಲವರು ಆಧಾರ್ ಅಥವಾ ಇತರ ಗುರುತಿನ ಕಾರ್ಡ್ ಗಳನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ ಕೋವಿನ್ ಅಪ್ಲಿಕೇಶನ್ ನಲ್ಲಿ ಮಕ್ಕಳ ನೋಂದಣಿ ವೇದಿಕೆಯು ವಯಸ್ಕರ ನೋಂದಣಿ ವೇದಿಕೆಗೆ ಹೋಲುತ್ತದೆ. 15-18 ವರ್ಷದೊಳಗಿನ ಮಕ್ಕಳು ಕೋವಿನ್ ಆ್ಯಪ್ ನಲ್ಲಿ ಅಪಾಯಿಂಟ್ ಮೆಂಟ್ ಕಾಯ್ದಿರಿಸಲು ಅಥವಾ ಯಾವುದೇ ಲಸಿಕೆ ಕೇಂದ್ರಕ್ಕೆ ತೆರಳಲು ಅಗತ್ಯ ಪೋಷಕ ದಾಖಲೆಗಳನ್ನು ಒದಗಿಸಿದ ನಂತರ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಭಾರತ್ ಬಯೋಟೆಕ್ ನ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಮಕ್ಕಳಲ್ಲಿ ತುರ್ತು ಬಳಕೆಗಾಗಿ ಈಗಾಗಲೇ ಅನುಮೋದನೆಯನ್ನು ಪಡೆದಿದೆ.










