1987ಕ್ಕಿಂತ ಮೊದಲು ಜನಿಸಿದವರು,ಹಾಗು ಅವರ ಮಕ್ಕಳು ಭಾರತೀಯ ಪೌರರೇ : ಕೇಂದ್ರ ಸ್ಪಷ್ಟನೆ…

576
firstsuddi

ನವದೆಹಲಿ : ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಉತ್ತಿರುವ ಪ್ರತಿಭಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ವೇಳೆ ಕೇಂದ್ರ ಗೃಹ ಸಚಿವಾಲಯ ಪೃತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯೆ ಅಡಿಯಲ್ಲಿ ಇರುವ ಕೆಲವು ಷರತ್ತುಗಳನ್ನು ಬಿಡುಗಡೆ ಮಾಡಿದೆ.
• ಭಾರತದಲ್ಲಿ 1987ಕ್ಕಿಂತ ಮೊದಲು ಜನಿಸಿದವರು ಅಥವಾ ಅವರ ಪೋಷಕರು 1987ರ ಮೊದಲು ಭಾರತದಲ್ಲಿ ಜನಿಸಿದ್ದರೆ ಅವರಿಗೆ ಸಹಜವಾಗಿ ಬಾರತದ ಪೌರತ್ವ ಸಿಗುತ್ತದೆ. ಇಂತವರು ಪೌರತ್ವ ತಿದ್ದುಪಡಿ ಮಸೂದೆ 2019 ಅಥವಾ ರಾಷ್ಟ್ರೀಯ ಪೌರತ್ವ ದಾಖಲಾತಿ(ಎನ್‍ಆರ್‍ಸಿ) ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ.
• 2004ರಲ್ಲಿ ಪೌರತ್ವ ಕಾಯ್ದೆಗೆ ಮಾಡಲಾಗಿದ್ದ ತಿದ್ದುಪಡಿಯಂತೆ ಅಸ್ಸಾಂ ನಾಗರೀಕರನ್ನು ಹೊರತುಪಡಿಸಿ ದೇಶದ ಉಳಿದ ನಾಗರೀಕರ ಪೋಷಕರಲ್ಲಿ ಯಾರಾದರೊಬ್ಬರು ಭಾರತೀಯರಾಗಿದ್ದು, ಅಲ್ಲದೇ ಇಬ್ಬರು ಅಕ್ರಮ ವಲಸಿಗರಾಗಿರದೆ ಇದ್ದರೆ ಅವರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಲಾಗುವುದು.
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳು, ಅನೇಕ ಸಂದೇಹಗಳನ್ನು ಹಬ್ಬಿಸಿ ಪ್ರತಿಭಟನೆಯ ಕಿಚ್ಚನ್ನು ಹೆಚ್ಚಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಸೂಚನೆಯನ್ನು ಹೊರಡಿಸಿದ್ದು, ಜನರಿಗೆ ಕಾಯ್ದೆ ಮತ್ತು ಅದರಲ್ಲಿರುವ ಅಂಶಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವರಣೆಯನ್ನು ನೀಡಿದೆ.