2 ವರ್ಷದ ಮಗಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ…

49
firstsuddi

ಕಲಬುರಗಿ: ಮಹಿಳೆಯೊಬ್ಬಳು ತನ್ನ 2 ವರ್ಷದ ಮಗಳನ್ನು ಕೊಲೆ ಮಾಡಿ ತಾನೂ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದ ತಾಯಿ ಶಿವಲೀಲಾ (23), ಮಗಳಾದ ವರ್ಷಿತಾ (2) ನೇಣಿಗೆ ಶರಣಾಗಿರುವ ದುರ್ದೈವಿಗಳಾಗಿದ್ದಾರೆ.

ನಿನ್ನೆ ಸಂಜೆ ಮರಪಳ್ಳಿ ಗ್ರಾಮದ ನಿವಾಸದಲ್ಲಿ ಶಿವಲೀಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿ ಶಿವಲೀಲಾ ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಶಿವಲೀಲಾ ಗಂಡನ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಬಂದಿದ್ದರು. ಎರಡು ದಿನಗಳ ಹಿಂದಷ್ಟೇ ಶಿವಲೀಲಾ ಮತ್ತೆ ಗಂಡನ ಮನೆಗೆ ತೆರಳಿದ್ದು, ಮಗುವನ್ನೂ ಕೊಂದು ತಾನೂ ನೇಣಿಗೆ ಶರಣಾಗಿದ್ದಾರೆ.

ಈ ಸಂಬಂಧ ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.