ಸ್ಟಾಕ್ಹೋಮ್:ಡೆನಿಸ್ ಮುಕ್ವೇಜ್ ಹಾಗೂ ನಾದಿಯಾ ಮುರಾದ್ 2018ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದ ನಾದಿಯಾ ಮುರಾದ್ಗೆ ಹಾಗೂ ವೈದ್ಯ ಡೆನಿಸ್ ಮುಕ್ವೇಜ್ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅನೇಕ ಮಹಿಳೆಯರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಬ್ಬರಿಗೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನೋಬೆಲ್ ಸಮಿತಿ ಮುಂದಾಗಿದೆ.










