ನವದೆಹಲಿ: ಭಾರತ ಪ್ರವಾಸಕ್ಕೆ ಆಗಮಿಸಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉಭಯ ನಾಯಕರ ಮಾತುಕತೆಯ ಬಳಿಕ ಭೋಜನ ಸಮಯದಲ್ಲಿ ರಷ್ಯಾದ ಕಲಾವಿದ ಸತಿ ಕಝನೋವಾ ಹಾಡಿ ಅಭಿನಯಿಸಿರುವ ಮಹಾತ್ಮ ಗಾಂಧಿಯವರ ನೆಚ್ಚಿನ ಭಜನಾ ಗೀತೆಯನ್ನು ಪುಟಿನ್ ಗೆ ಮೊಬೈಲ್ನಲ್ಲಿ ತೋರಿಸಿದ್ದಾರೆ. ಪುಟಿನ್ ಮತ್ತು ಮೋದಿ ಅವರು ವಿಡಿಯೋ ನೋಡುತ್ತಿರುವ ದೃಶ್ಯವನ್ನು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.











