ಶಿವಮೊಗ್ಗ: ಹಳೇ ಜೈಲು ಆವರಣದಲ್ಲಿ ನಡೆಯುತ್ತಿರುವ ದಸರಾ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ಜನರು ಕಟ್ಟುತ್ತಿರುವ ತೆರಿಗೆ ಹಣ ಎಲ್ಲಿ ಹೋಗ್ತಾ ಇದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರಿದಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳಿಂದ ರೈತರಿಗೆ ನಿರಂತರ ನೋಟಿಸ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಇತಿಹಾಸದಲ್ಲೇ ಇಂತಹ ಸರ್ಕಾರವನ್ನು ನೋಡಿಲ್ಲ. ಸರ್ಕಾರ ಇದೆಯಾ ಎನ್ನುವುದೇ ಪ್ರಶ್ನೆಯಾಗಿರುವಾಗ ಸಂಪುಟ ವಿಸ್ತರಣೆ ಹೇಗೆ ಸಾಧ್ಯ, ಸಂಪುಟ ವಿಸ್ತರಣೆ ದೂರದ ಮಾತು ಎಂದಿದ್ದಾರೆ.










