ವಾಷಿಂಗ್ಟನ್ : 2023ಕ್ಕೆ ವಿಶ್ವದಾದ್ಯಂತ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದೆ.
ಎರಡು ವರ್ಷಗಳ ಹಿಂದೆಯಷ್ಟೇ ಅಮೆರಿಕದಲ್ಲಿ ಈ ಪೌಡರ್ ಮಾರಾಟವನ್ನು ನಿಲ್ಲಿಸಲಾಗಿತ್ತು. ಈಗ ವಿಶ್ವಾದ್ಯಂತ ಈ ಪೌಡರ್ ಮಾರಾಟ ನಿಲ್ಲಲಿದೆ. ಈ ಬೇಬಿ ಪೌಡರ್ ಬಳಕೆಯಿಂದಾಗಿ ಕ್ಯಾನ್ಸರ್ ಬರುತ್ತದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಕಂಪನಿಯ ವಿರುದ್ಧ ಸಾವಿರಾರು ಪ್ರಕರಣಗಳು ದಾಖಲಾಗಿದ್ದವು. ನಂತರ, ಕಂಪನಿಯ ಮಾರಾಟವು ನಿರಂತರವಾಗಿ ಕಡಿಮೆಯಾಗುತ್ತಿದೆ, ಈ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಪೌಡರ್ ನಲ್ಲಿ ಕಂಡುಬರುವ ಹಾನಿಕಾರಕ ಫೈಬರ್ ಆಸ್ಬೆಸ್ಟೋಸ್ ನಿಂದಾಗಿ ಜನರಲ್ಲಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಲವು ಗ್ರಾಹಕರ ದೂರು ನ್ಯಾಯಾಲಯದ ಮೆಟ್ಟಿಲೇರಿದ್ದು, ಕಂಪನಿ ಸಾವಿರಾರು ಕೋಟಿ ದಂಡ ಕಟ್ಟಿದೆ. ಹೀಗಾಗಿ ವಿಶ್ವದಾದ್ಯಂತ ಮೌಲ್ಯಮಾಪನವಾಗಿ, ನಾವು ಎಲ್ಲಾ ಕಾರ್ನ್ ಸ್ಟಾರ್ಚ್ ಆಧಾರಿತ ಬೇಬಿ ಪೌಡರ್ಗಳ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಜಾನ್ಸನ್ ಮತ್ತು ಜಾನ್ಸನ್ ನಿನ್ನೆ ಪ್ರಕಟಿಸಿದೆ.
ಪೌಡರ್ ಬಗ್ಗೆ ಅನೇಕ ದೂರುಗಳು ಬಂದರೂ ಕಂಪನಿ ಮಾತ್ರ ತನ್ನ ಪೌಡರ್ ಬಗ್ಗೆ ಸಂಶೋಧನೆ ನಡೆಸಿದ್ದು, ಟಾಲ್ಕಮ್ ಬೇಬಿ ಪೌಡರ್ ಸುರಕ್ಷಿತವಾಗಿದೆ ಮತ್ತು ಕ್ಯಾನ್ಸರ್ ಗೆ ಕಾರಣವಾಗುವುದಿಲ್ಲ ಎಂದು ಹೇಳಿಕೊಂಡಿದೆ.










